ವಿಧಾನಪರಿಷತ್‌ನಲ್ಲಿ ಅಬ್ಬರಿಸುತ್ತಿದ್ದ ಕಾಂಗ್ರೆಸ್‌ ಕಟ್ಟಾಳು ಈಗ ಸೈಲೆಂಟ್‌!

ಕಾಂಗ್ರೆಸ್‌ ಸರ್ಕಾರದ ಅದ್ಭುತ ಗೆಲುವು, ನಂತರದ ಸರ್ಕಾರ-ಸಂಪುಟ ರಚನೆ, ಗ್ಯಾರಂಟಿ ಯೋಜನೆ, ಬಳಿಕ ಅಧಿವೇಶನ ಈ ಎಲ್ಲಾ ಘಟನೆಗಳಿಂದ ಒಬ್ಬ ಕಾಂಗ್ರೆಸ್‌ ನಾಯಕ ಕಾಣೆಯಾಗಿದ್ದಾರೆ. ವಿಧಾನ ಪರಿಷತ್‌ನಲ್ಲಿ ಅಬ್ಬರಿಸುತ್ತಿದ್ದ ಕಾಂಗ್ರೆಸ್‌ ಕಟ್ಟಾಳು ಬಿಕೆ ಹರಿಪ್ರಸಾದ್‌ ಈಗ ಫುಲ್‌ ಸೈಲೆಂಟ್‌ ಆಗಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.15): ರಾಜ್ಯ ರಾಜಕಾರಣದಲ್ಲಿ ಏನೋ ಹೊಸದಾದ ಬೆಳವಣಿಗೆ ನಡೆಯುತ್ತಿದೆ. ಚುನಾವಣೆಗಳು ಆಯ್ತು, ಹೊಸ ಸರ್ಕಾರ, ಸಂಪುಟ ಬಂದಾಯ್ತು, ಸಿದ್ಧರಾಮಯ್ಯ ಮುಖ್ಯಮಂತ್ರಿ ಆದ್ರು, ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಮುಗಿಬಿದ್ದಿದ್ದಾರೆ.

ಈ ಎಲ್ಲದರ ನಡುವೆ ಒಬ್ಬ ವ್ಯಕ್ತಿ ಬಹಳ ಮಿಸ್ಸಿಂಗ್ ಅನಿಸುತ್ತಿದೆ. ವಿಧಾನಪರಿಷತ್‌ನ ಸಭಾನಾಯಕರಾಗಿದ್ದ ಬಿಕೆ ಹರಿಪ್ರಸಾದ್‌ ಎಲ್ಲಿ ಹೋದರು ಎನ್ನುವ ಕುತೂಹಲ ಎಲ್ಲರಲ್ಲಿದೆ. ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಹರಿಪ್ರಸಾದ್‌ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ತುಮಕೂರು ಲೋಕಸಭಾ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌! ಯಾರೆಲ್ಲಾ ಇದ್ದಾರೆ ರೇಸ್‌ನಲ್ಲಿ?

ಅದರೊಂದಿಗೆ ಪರಿಷತ್‌ ಕಲಾಪಗಳಿಗೂ ಅವರು ಗೈರಾಗುತ್ತಿದ್ದಾರೆ. ಬಿಜೆಪಿಯನ್ನು ಟೀಕೆ ಮಾಡುವಾಗ ಉಗ್ರ ಹೇಳಿಕೆಗಳಿಂದ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದ ಬಿಕೆ ಹರಿಪ್ರಸಾದ್‌ ಮೌನ ಎಷ್ಟು ಪರಿಣಾಮಕಾರಿಯಾಗಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Related Video