Party Rounds: ಬಿಜೆಪಿ ಕಾರ್ಯಕರ್ತರಿಗೆ ಬೂತ್ ಗೆಲ್ಲಲು ಪ್ರಧಾನಿ ಮೋದಿ ರಾಜಕೀಯ ಪಾಠ!
ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಕಾರ್ಯಕರ್ತರೊಂದಿಗೆ ಗುರುವಾರ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಪ್ರತಿ ಬೂತ್ ಗೆದ್ದರೆ ಪಕ್ಷ ಗೆದ್ದಂತೆ, ಆದ್ದರಿಂದ ಪ್ರತಿ ಬೂತ್ ಗೆಲವಿಗೆ ಶ್ರಮ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಂಗಳೂರು (ಏ.27): ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಸುಳ್ಳು, ಗ್ಯಾರಂಟಿ ರಹಿತ ಪಕ್ಷ, ಹಾಗಿರುವಾಗ ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆಯನ್ನು ಜನತೆ ನಂಬುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಕಾರ್ಯಕರ್ತರೊಂದಿಗೆ ಗುರುವಾರ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಪ್ರತಿ ಬೂತ್ ಗೆದ್ದರೆ ಪಕ್ಷ ಗೆದ್ದಂತೆ, ಆದ್ದರಿಂದ ಪ್ರತಿ ಬೂತ್ ಗೆಲವಿಗೆ ಶ್ರಮ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರತಿ ಬೂತ್‌ನಲ್ಲಿ 10 ಪುರುಷರು ಹಾಗೂ 10 ಮಹಿಳಾ ಕಾರ್ಯಕರ್ತರ ತಂಡ ರಚಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳ ಮಾಹಿತಿಯನ್ನು ಮೊಬೈಲ್ ಮತ್ತು ತಮ್ಮ ಡೈರಿಗಳಲ್ಲಿ ಸಿದ್ಧಪಡಿಸಿ ಪ್ರಚುರಪಡಿಸುವ ಬಗ್ಗೆ ರೂಪುರೇಷೆ ತಯಾರಿಸಬೇಕು. ಮನೆ ಮನೆ ಭೇಟಿ ವೇಳೆ ಮನೆಯ ಸದಸ್ಯರ ಕುಶಲೋಪರಿ ವಿಚಾರಿಸಿ ಮಕ್ಕಳ ಜತೆ ಮಾತನಾಡಬೇಕು. ನಂತರ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.