Asianet Suvarna News Asianet Suvarna News

Party Rounds: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ: 5 ಕೆಜಿ ಅಕ್ಕಿ, ಪ್ರತಿದಿನ ಅರ್ಧ ಲೀ.ಹಾಲು, ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್

ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿಯು, ಅಧಿಕಾರಕ್ಕೆ ಬಂದರೆ ಪಡಿತರದಲ್ಲಿ 5 ಕೆಜಿ ಅಕ್ಕಿ ಜೊತೆ ಇನ್ನೂ 5 ಕೆಜಿ ಸಿರಿಧಾನ್ಯ ವಿತರಣೆ ವಿತರಣೆ ಮಾಡುವುದಾಗಿ ಹಾಗೂ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವ ಭರವಸೆಯನ್ನು ನೀಡಿದೆ. 

First Published May 1, 2023, 8:42 PM IST | Last Updated May 1, 2023, 8:42 PM IST

ಬೆಂಗಳೂರು (ಮೇ.01): ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿಯು, ಅಧಿಕಾರಕ್ಕೆ ಬಂದರೆ ಪಡಿತರದಲ್ಲಿ 5 ಕೆಜಿ ಅಕ್ಕಿ ಜೊತೆ ಇನ್ನೂ 5 ಕೆಜಿ ಸಿರಿಧಾನ್ಯ ವಿತರಣೆ ವಿತರಣೆ ಮಾಡುವುದಾಗಿ ಹಾಗೂ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವ ಭರವಸೆಯನ್ನು ನೀಡಿದೆ. ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

16 ಭರವಸೆಗಳ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಿಜೆಪಿಯ ಭರವಸೆಗಳು ಇಂತಿದೆ: 
* ಬಿಪಿಎಲ್ ಕುಟುಂಬಕ್ಕೆ ಯುಗಾದಿ, ದೀಪಾವಳಿ, ಗಣೇಶ ಹಬ್ಬಕ್ಕೆ 3 ಫ್ರೀ ಸಿಲಿಂಡರ್.
* ಪೋಷಣಾ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀ. ನಂದಿನಿ ಹಾಲು.
* ಪ್ರತೀ ಕುಟುಂಬಕ್ಕೆ ಪಡಿತರದಲ್ಲಿ 5 ಕೆಜಿ ಸಿರಿಧಾನ್ಯ.
* ಎಸ್‌ಸಿ ಎಸ್‌ಟಿ ಮಹಿಳೆಯರಿಗೆ 5 ವರ್ಷಕ್ಕೆ 10 ಸಾವಿರ ಠೇವಣಿ.
* ಪ್ರತೀ ಮಹಾನಗರ ಪಾಲಿಕೆ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರ.
* ವಿಶ್ವೇಶ್ವರಯ್ಯ ವಿದ್ಯಾಯೋಜನೆಯಡಿ ಸರ್ಕಾರಿ ಶಾಲೆಗಳ ಉನ್ನತೀಕರಣ.
* ಐಎಎಸ್‌ ಕೆಎಎಸ್‌ ಅಭ್ಯರ್ಥಿಗಳಿಗೆ ಆರ್ಥಿಕ ನೆರವು.
* ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತನೆ.
* ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ.
* ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ಸೌಲಭ್ಯ.
* ಸಮನ್ವಯ ಯೋಜನೆಯಡಿ ಸಣ್ಣ ಕೈಗಾರಿಗಳಲ್ಲಿ ಉದ್ಯೋಗಕ್ಕಾಗಿ ಒಡಂಬಡಿಕೆ.
* ಮಿಷನ್ ಸ್ವಾಸ್ಠ್ಯ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ.
* ಕರ್ನಾಟಕವನ್ನು ದೇಶದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವನ್ನಾಗಿ ರೂಪಿಸಲು 1,500 ಕೋಟಿ ವಿನಿಯೋಗ.
* ಕರ್ನಾಟಕ ಅಪಾರ್ಟ್ಮೆಂಟ್ ಕಾಯಿದೆ ತಿದ್ದುಪಡಿ.
* ಬೆಂಗಳೂರಿನ ಹೊರಗೆ ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗ  ಸೃಷ್ಟಿಸುವ ಹಬ್.
* ಮೂರು ಜಿಲ್ಲೆಗೆ ಮೆಟ್ರೋ ಸೌಲಭ್ಯ ವಿಸ್ತರಣೆ ಹುಬ್ಬಳ್ಳಿ-ಧಾರಾವಾಢ, ಬೆಳಗಾವಿ ಮತ್ತು ಮೈಸೂರು.

Video Top Stories