ಮೀಸಲಾತಿ ಪಡೆಯದೇ ಹಿಂತಿರುಗಲ್ಲ; ಇಂದಿನಿಂದ ಪಂಚಮಸಾಲಿಗಳ ಧರಣಿ ಸತ್ಯಾಗ್ರಹ ಶುರು

2 ಎ  ಮೀಸಲಾತಿಗೆ ಆಗ್ರಹಿಸಿ, ಅರಮನೆ ಮೈದಾನದಲ್ಲಿ ಪಂಚಮಸಾಲಿಗಳ ಬೃಹತ್ ಸಮಾವೇಶ ನಡೆದಿದೆ. ಇಂದಿನಿಂದ ಮೌರ್ಯ ಸರ್ಕಲ್‌ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಯಲಿದೆ. 

First Published Feb 22, 2021, 9:55 AM IST | Last Updated Feb 22, 2021, 10:08 AM IST

ಬೆಂಗಳೂರು (ಫೆ. 22): 2 ಎ  ಮೀಸಲಾತಿಗೆ ಆಗ್ರಹಿಸಿ, ಅರಮನೆ ಮೈದಾನದಲ್ಲಿ ಪಂಚಮಸಾಲಿಗಳ ಬೃಹತ್ ಸಮಾವೇಶ ನಡೆದಿದೆ. ಇಂದಿನಿಂದ ಮೌರ್ಯ ಸರ್ಕಲ್‌ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಯಲಿದೆ. ಮಾರ್ಚ್ 4 ರವರೆಗೆ ಈ ಧರಣಿ ಸತ್ಯಾಗ್ರಹ ನಡೆಯಲಿದೆ. 

2ಎ ಗಾಗಿ ಪಂಚಮಸಾಲಿ ಪಟ್ಟು, ಮೀಸಲಾತಿಗೆ ಸರ್ಕಾರಕ್ಕೆ ಮಾ. 4 ಗಡುವು 

ಪ್ರವರ್ಗ 2 ಎ ಮೀಸಲಾತಿ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಮಾ. 4 ರವರೆಗೆ ಧರಣಿ ಸತ್ಯಾಗ್ರಹ, ಅಲ್ಲಿಗೂ ಸರ್ಕಾರ ಮಣಿಯದಿದ್ರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಮೀಸಲಾತಿ ಆದೇಶ ಇಲ್ಲದೇ ಮಠಕ್ಕೆ ಮರಳುವುದಿಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಶಪಥ ತೊಟ್ಟಿದ್ದಾರೆ. 

 

 

Video Top Stories