News Hour: ಲೋಕಸಭೆ ಹೊತ್ತಲ್ಲಿ ಕಿಚ್ಚೆಬ್ಬಿಸಿದ ಜಿಂದಾಬಾದ್ ಜಟಾಪಟಿ

ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ರಾಜ್ಯದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಜಟಾಪಟಿ ಜೋರಾಗಿ ನಡೆಯುತ್ತಿದೆ. ಇಂದು ವಿಧಾನಮಂಡಲದ ಉಭಯ ಕಲಾಪಗಳನ್ನು ಇದು ಭಾರೀ ಚರ್ಚೆಗೆ ಕಾರಣವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.28): ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಜಿಂದಾಬಾದ್ ಜಟಾಪಟಿ ಜೋರಾಗಿದೆ. ವಿಡಿಯೋ ಆಧರಿಸಿ ಮೂವರು ನಾಸಿರ್‌ ಹುಸೇನ್‌ ಬೆಂಬಲಿಗರ ವಿಚಾರಣೆ ನಡೆದಿದೆ. ಆರೋಪಿಗಳ ಬಂಧನಕ್ಕೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನಾ ಕಹಳೆ ಮೊಳಗಿಸಿದೆ.

ಇದರ ನಡುವೆ ಪಾಕಿಸ್ತಾನ್‌ ಜಿಂದಾಬಾದ್‌ ಗಲಾಟೆಯ ನಡುವೆ ಬಿಜೆಪಿ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಹಾಕಿದ್ದ ಪೋಸ್ಟರ್‌ ಕಾಂಗ್ರೆಸ್‌ ಪಕ್ಷವನ್ನು ಕೆಂಡಾಮಂಡಲ ಮಾಡಿದೆ. ಕಾಂಗ್ರೆಸ್‌ ಪಕ್ಷದ ಕೈ ಚಿನ್ಹೆಯನ್ನು ಹಸಿರು ಬಣ್ಣದಲ್ಲಿ ಚಿತ್ರಿಸಿ, ಪಾ'ಕೈ'ಸ್ತಾನ್‌ ಎಂದು ಬರೆದಿದ್ದಕ್ಕೆ ಎರಡೂ ಪಕ್ಷಗಳ ನಡುವೆ ಟ್ವೀಟ್‌ ವಾರ್‌ ನಡೆದಿದೆ.

Watch: ಇದೆಂಥಾ ಸಂಭ್ರಮ... ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ!

ಇನ್ನು ಕಲಾಪದಲ್ಲಿ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್ ಬೆಂಕಿ ಹಚ್ಚೋ ಹೇಳಿಕೆಗೆ ಬಿಜೆಪಿ ಕಿಡಿಕಿಡಿಯಾಗಿದೆ. ವಿಧಾನಸಭೆಯಲ್ಲೂ ಪೇಪರ್ ಹರಿದು ಬಿಜೆಪಿ ಹೈಡ್ರಾಮಾ ಮಾಡಿದೆ. ಘೋಷಣೆ ಕೂಗದಿದ್ರೆ ಬಾಯಿ ಮುಚ್ಚಿದ್ದೇಕೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ನಿಮ್ಮಿಂದ ದೇಶಭಕ್ತಿ ಪಾಠ ಬೇಕಿಲ್ಲ ಎಂದು ಪರಮೇಶ್ವರ್ ಸಿಡಿಮಿಡಿಯಾಗಿದ್ದಾರೆ.

Related Video