'ಇದು ನನ್ನ ಕೊನೆಯ ಚುನಾವಣೆ, 80 ದಾಟಿದ ಮೇಲೆ ಕೋಲು ಹಿಡಿದು ರಾಜಕೀಯ ಮಾಡೋಕಾಗಲ್ಲ'
ಇನ್ನೊಂದು ಚುನಾವಣೆಯಲ್ಲಿ ನಿಲ್ಲಬೇಕು ಅಂದುಕೊಂಡಿದ್ದೇನೆ, ಇದೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಜು. 09): ಇನ್ನೊಂದು ಚುನಾವಣೆಯಲ್ಲಿ ನಿಲ್ಲಬೇಕು ಅಂದುಕೊಂಡಿದ್ದೇನೆ, ಇದೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರಬೇಕಾದರೆ, ಆರೋಗ್ಯವಾಗಿರಬೇಕಾದರೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಕಾರಣ, ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತದೆ. ಆಮೇಲೆ ರಾಜಕೀಯ ಮಾಡಕಾಗಲ್ಲ ಎಂದರು.