ರಾಜ್ಯಾಧ್ಯಕ್ಷರ ಬಳಿಕ ವಿಪಕ್ಷ ನಾಯಕನ ಆಯ್ಕೆ ಸರ್ಕಸ್‌ ! ಇಂದೇ ಬಿಜೆಪಿ ಶಾಸಕಾಂಗ ಸಭೆ ? ಯಾರಿಗೆ ಲಕ್‌ ?

ನಾಳೆ ವಿಪಕ್ಷ ನಾಯಕರ ಆಯ್ಕೆಗೆ ಬಿಜೆಪಿಯಲ್ಲಿ ಮುಹೂರ್ತ
ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ನಾಳೆ ಮೀಟಿಂಗ್..!
ಎಲ್ಲಾ ಶಾಸಕರಿಗೂ ಹಾಜರಾಗುವಂತೆ ವಿಜಯೇಂದ್ರ ಸೂಚನೆ

First Published Nov 17, 2023, 10:33 AM IST | Last Updated Nov 17, 2023, 10:33 AM IST

ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಬೆನ್ನಲ್ಲೇ ವಿಪಕ್ಷ ನಾಯಕನ(Opposition Leader) ಆಯ್ಕೆ ಕಸರತ್ತು ಜೋರಾಗಿದೆ. ಇಂದು ಈ ಸಂಬಂಧ ಶಾಸಕಾಂಗ ಸಭೆ(Legislature party meeting) ನಡೆಯಲಿದೆ. ಈ ಸಭೆಗೆ ಎಲ್ಲಾ ಶಾಸಕರೂ ಹಾಜರಾಗುವಂತೆ ಬಿ.ವೈ. ವಿಜಯೇಂದ್ರ(B. Y. Vijayendra) ಸೂಚನೆ ನೀಡಿದ್ದಾರೆ. ಇನ್ನೂ ಪ್ರತಿಪಕ್ಷ ನಾಯಕನ ಆಯ್ಕೆಗೆ ದೆಹಲಿಯಿಂದ ವೀಕ್ಷಕರು ಬರಲಿದ್ದಾರೆ. ಕೇಂದ್ರ ನಾಯಕರ ಸೂಚನೆಯಂತೆ ಆಯ್ಕೆ ನಡೆಯಲಿದೆ. ಹೈಕಮಾಂಡ್‌ ಸೂಚಿಸಿದ ಹೆಸರಿಗೆ ಇಂದು ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವೀಕ್ಷಕರು ತೆರಳಲಿದ್ದಾರೆ. ಬಳಿಕ ದೆಹಲಿಯಲ್ಲಿ ಚರ್ಚಿಸಿ ವಿಪಕ್ಷ ನಾಯಕನ ಘೋಷಣೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಇಂದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಎಲ್ಲಾರಲ್ಲೂ ಕುತೂಹಲವನ್ನು ಮೂಡಿಸಿದೆ. 

ಇದನ್ನೂ ವೀಕ್ಷಿಸಿ:  ಟೈಗರ್ 3 ರಿಲೀಸ್‌ ದಿನ ಪಟಾಕಿ ಸಿಡಿಸಿದ ಅಭಿಮಾನಿಗಳು..ಈ ವಿಡಿಯೋ ನೋಡಿ ಸಲ್ಮಾನ್‌ ಖಾನ್‌ ಶಾಕ್‌ !

Video Top Stories