ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಯು ಟರ್ನ್, ಉಚಿತ ಗ್ಯಾರೆಂಟಿಗೆ ಕಂಡೀಷನ್ ಅಪ್ಲೈ!
ಎಲ್ಲರಿಗಿಲ್ಲ ಗ್ಯಾರೆಂಟಿ ಎಂದ ಕಾಂಗ್ರೆಸ್, ಪರಮೇಶ್ವರ್ ಮುಖ್ಯಮಂತ್ರಿ ಮಾಡಲು ಹೋರಾಟ ಶುರು, ಮಧ್ಯಪ್ರದೇಶ, ರಾಜಸ್ಥಾನ ಹಾದಿಯಲ್ಲಿ ಸಾಗುತ್ತಾ ಕರ್ನಾಟಕ ಕಾಂಗ್ರೆಸ್, ಕರ್ನಾಟದ ಸಿಎಂ ಯಾರು? ಇಂದಿನ ಇಡೀ ದಿನದ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 5 ಉಚಿತ ಗ್ಯಾರೆಂಟಿ ಘೋಷಿಸಿದೆ. ಇನ್ನು ನಾಯಕರು ಭಾಷಣದ ವೇಳೆ ಈ ಗ್ಯಾರೆಂಟಿ ಯಾವುದೇ ಷರತ್ತುಗಳಿಲ್ಲ. ಎಲ್ಲರಿಗೂ ಅನ್ವಯವಾಗಲಿದೆ ಎಂದಿತ್ತು. ಚುನಾವಣೆಯಲ್ಲಿ 135 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಇತಿಹಾಸ ರಚಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಉಚಿತ ಗ್ಯಾರೆಂಟಿಯ ಸ್ವರೂಪ ಬದಲಾಗಿದೆ. ಉಚಿತ ಗ್ಯಾರೆಂಟಿಗೆ ಕಂಡೀಷ್ ಅಪ್ಲೈ ಆಗಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಮೊದಲೇ ಕ್ಯಾಬಿನೆಟ್‌ನಲ್ಲಿ 5 ಗ್ಯಾರೆಂಟಿ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಸುಮ್ಮನೆ ಕೊಡಲು ಆಗುವುದಿಲ್ಲ. ಅದಕ್ಕೆ ಒಂದು ಮಾನದಂಡೆ ಇರಬೇಕಲ್ಲ. ಎಲ್ಲವನ್ನೂ ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.