ಕಾರ್ಯಕರ್ತರ ಕಾರು ಪರಿಶೀಲಿಸದಂತೆ ಶಾಸಕ ರಾಮಪ್ಪ ಲಮಾಣಿ ಪತ್ರ, ಇದ್ಯಾವ ರೀತಿ ದರ್ಪ?

  • ಆಂಧ್ರಪ್ರದೇಶದ ಕಾರು ರಾಜ್ಯದಲ್ಲಿ ಹಿಡಿಯದಂತೆ ಶಾಸಕರ ಪತ್ರ
  • ಶಾಸಕ ರಾಮಪ್ಪ ಲಮಾಣಿ ಸಹಿ ಹಾಕಿರುವ ಪತ್ರ ವೈರಲ್
  • ಹಾರಿಕೆ ಉತ್ತರ ನೀಡಿ ಜಾರಿಕೊಂಡ ಶಾಸಕ ರಾಮಪ್ಪ
First Published Jul 13, 2022, 12:44 PM IST | Last Updated Jul 13, 2022, 12:44 PM IST

ಗದಗ(ಜು.13):  ಆಂಧ್ರಪ್ರದೇಶದ ಕಾರ್ಯಕರ್ತನ ಕಾರನ್ನು ರಾಜ್ಯದಲ್ಲಿ ತಡೆಯದಂತೆ ಹಾಗೂ ಪರಿಶೀಲಿಸದಂತೆ ಶಾಸಕ ರಾಮಪ್ಪ ಲಮಾಣಿ ಪತ್ರ ನೀಡಿದ್ದು ಇದು ವಿವಾದಕ್ಕೆ ಕಾರಣಾಗಿದೆ. ಆಂಧ್ರ ಪ್ರದೇಶದ ಕಾರ್ಯಕರ್ತನ ಕಾರಿನ ನಂಬರ್ ದಾಖಲಿಸಿ ಈ ಕಾರನ್ನು ಪೊಲೀಸರು ಪರಿಶೀಲಿಸಬಾರದು ಹಾಗೂ ತಡೆಯಬಾರದು ಎಂದು ಖುದ್ದು ಶಾಸಕರೇ ಸಹಿ ಹಾಕಿ ಸೀಲ್ ಹಾಕಿರುವ ಪತ್ರ ಇದೀಗ ವೈರಲ್ ಆಗಿದೆ. ಕಾರ್ಯಕರ್ತ ಜಿ ಬಸವರಾಜ್ ಈ ಪತ್ರವನ್ನು ಹಿಡಿದು ರಾಜರೋಷವಾಗಿ ತಿರುಗಾಡುತ್ತಿದ್ದು, ತಡೆದ ಪೊಲೀಸರನ್ನ ಪ್ರಶ್ನಿಸಿದ ಘಟನೆ ನಡೆದಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿ ಕರೆ ಮಾಡಿ ಶಾಸಕರ ಬಳಿ ಸ್ಪಷ್ಟನೆ ಕೇಳಿದರೆ ಹಾರಿಕೆಯ ಉತ್ತರ ನೀಡಿದ್ದಾರೆ.