Asianet Suvarna News Asianet Suvarna News

ವಿಪಕ್ಷದಿಂದಲೂ ಇಲ್ಲ ಎನ್‌ಡಿಎ ಸಭೆಗೂ ಆಹ್ವಾನವಿಲ್ಲ; ಸ್ಪಷ್ಟನೆ ನೀಡಿದ ಕುಮಾರಸ್ವಾಮಿ!

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾ ಜೆಡಿಎಸ್? ಕಳೆದ 2 ತಿಂಗಳಲ್ಲಿ ಕಾಂಗ್ರೆಸ್ ವರ್ಗಾವಣೆ ಮೂಲಕ 500 ಕೋಟಿ ರೂ ದಂಧೆ, ಎಸ್‌ಸಿ ಎಸ್‌ಟಿ ಯೋಜನೆ ಹಣವನ್ನು ಗ್ಯಾರೆಂಟಿ ಯೋಜನೆಗೆ ಖರ್ಚು, ಬಿಜೆಪಿ ಆರೋಪ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
 

ವಿಪಕ್ಷಗಳ ಮಹಾ ಮೈತ್ರಿ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬಿಜೆಪಿ ಮಣಿಸಲು ನಾಳೆ ಮಹತ್ವದ ಚರ್ಚೆ ನಡೆಯಲಿದೆ. ಈಗಾಗಲೇ ಘಟಾನುಘಟಿ ನಾಯಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ.ನಾಳೆ ದೆಹಲಿಯ ಅಶೋಕ ಹೊಟೆಲ್‌ನಲ್ಲಿ ಎನ್‌ಡಿಎ ಸಭೆ ಆಯೋಜಿಸಲಾಗಿದೆ. ಬೆಂಗಳೂರಿನ ವಿಪಕ್ಷಗಳ ಸಭೆ ಸೆಡ್ಡು ಹೊಡೆದಿರುವ ಬಿಜೆಪಿ ಬೃಹತ್ ಸಭೆ ಆಯೋಜಿಸಿದೆ.38 ಪಕ್ಷಗಳು ಎನ್‌ಡಿಎ ಸಭೆಗೆ ಬೆಂಬಲ ಸೂಚಿಸಿದೆ ಎಂದು ಬಿಜೆಪಿ ಹೇಳಿದೆ.ವಿಪಕ್ಷಗಳ ಮೈತ್ರಿ ಹಾಗೂ ಎನ್‌ಡಿಎ ಸಭೆಗೂ ಜೆಡಿಎಸ್‌ಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆ, ರೈತರ ಸಮಾಧಿ ಮೇಲೆ ನಡೆಸಲಾಗುತ್ತಿದೆ ಎಂದು ಹೆಚ್‌‌ಡಿಕೆ ಹೇಳಿದ್ದಾರೆ.