ಹುಬ್ಬಳ್ಳಿ-ಧಾರವಾಡ ಪಾಲಿಕೆ: ಆಪ್ತರಿಗೆ ಪಟ್ಟ ಕಟ್ಟಲು ಬಿಜೆಪಿ ನಾಯಕರ ಕಸರತ್ತು..!
* ಮೇಯರ್, ಉಪಮೇಯರ್ ಆಯ್ಕೆಗೆ ಮೀನಾಮೇಷ ಎಣಿಸುತ್ತಿರುವ ಸರ್ಕಾರ
* ಹುಬ್ಬಳ್ಳಿಯವರೇ ಆದ ಬೊಮ್ಮಾಯಿ ಸಿಎಂ ಆದರೂ ವಿಳಂಬ ಯಾಕೆ?
* ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ದುರಸ್ತಿ, ಸ್ವಚ್ಛತೆ, ರಸ್ತೆ ಕೆಲಸ ವಿಳಂಬ
ಹುಬ್ಬಳ್ಳಿ-ಧಾರವಾಡ(ನ.08): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 2 ತಿಂಗಳುಗಳು ಆಗಿವೆ. ಆದರೆ ಮೇಯರ್, ಉಪಮೇಯರ್ ಆಯ್ಕೆಗೆ ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿದೆ. ತಮ್ಮ ಆಪ್ತರಿಗೆ ಪಟ್ಟ ಕಟ್ಟಲು ತೆರೆಯಲ್ಲಿ ಬಿಜೆಪಿ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪುನೀತ್ ರಾಜ್‌ಕುಮಾರ್ 11ನೇ ದಿನ ಕಾರ್ಯ ಮಾಡಿದ ವಿನಯ್ ರಾಜ್‌ಕುಮಾರ್!
ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದರೂ ಕೂಡ ವಿಳಂಬ ಯಾಕೆ? ಅಂತ ಅವಳಿ ನಗರದ ಸಾರ್ವಜನಿಕರ ಪ್ರಶ್ನೆಯಾಗಿದೆ. ಪಾಲಿಕೆಗೆ ಮೇಯರ್, ಉಪಮೇಯರ್ ಆಯ್ಕೆಯಾಗದ ಕಾರಣ ಮಹಾನಗರದಲ್ಲಿ ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ದುರಸ್ತಿ, ಸ್ವಚ್ಛತೆ, ರಸ್ತೆ ಕೆಲಸ ವಿಳಂಬವಾಗಿದೆ. ಇದರಿಂದ ಸಾರ್ವಜನಿಕರು ಮಾತ್ರ ಇನ್ನಿಲ್ಲದ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ.