
Karnataka Cabinet Expansion: ಸಚಿವಾಕಾಂಕ್ಷಿಗಳಿಗೆ ಶಾಕಿಂಗ್ ನ್ಯೂಸ್..!
* ಸಚಿವಾಕಾಂಕ್ಷಿಗಳಿಗೆ ಭಾರೀ ನಿರಾಸೆ
* ಪಂಚರಾಜ್ಯಗಳ ಚುನಾವಣೆ ಮುಗಿದರೂ ಕೂಡ ಕಡಿಮೆಯಾಗದ ಎಫೆಕ್ಟ್
* ನಾಲ್ಕು ರಾಜ್ಯಗಳ ಸಂಪುಟ ಸರ್ಕಸ್‌ನಲ್ಲಿ ಬಿಜೆಪಿ ಹೈಕಮಾಂಡ್ ಬ್ಯುಸಿ
ಬೆಂಗಳೂರು(ಮಾ.22): ರಾಜ್ಯ ಸಂಪುಟ ಸರ್ಜರಿಗೆ ಕಾದು ಕುಳಿತಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ಹೌದು, ಸದ್ಯಕ್ಕೆ ಸಂಪುಟ ಸರ್ಜರಿ ಅಥವಾ ಪುನರ್ ರಚನೆಯಾಗುವುದಿಲ್ಲ ಅಂತ ತಿಳಿದು ಬಂದಿದೆ. ಈ ಮೂಲಕ ಸಚಿವಾಕಾಂಕ್ಷಿಗಳಿಗೆ ಭಾರೀ ನಿರಾಸೆಯಾಗಿದೆ. ಏಪ್ರಿಲ್ ಮೊದಲ ವಾರದವರೆಗೂ ರಾಜ್ಯ ಸಂಪುಟ ಸರ್ಜರಿ ಮಾಡೋದಿಲ್ಲ. ಪಂಚರಾಜ್ಯಗಳ ಚುನಾವಣೆ ಮುಗಿದರೂ ಕೂಡ ಎಫೆಕ್ಟ್ ಕಡಿಮೆಯಾಗಿಲ್ಲ. ಗೆದ್ದ ನಾಲ್ಕು ರಾಜ್ಯಗಳ ಸಂಪುಟ ಸರ್ಕಸ್‌ನಲ್ಲಿ ಬಿಜೆಪಿ ಹೈಕಮಾಂಡ್ ಬ್ಯುಸಿಯಾಗಿದೆ. ಹೀಗಾಗಿ ನಮ್ಮ ರಾಜ್ಯದ ಸಚಿವ ಸಂಪುಟದ ಸರ್ಜರಿ ಸದ್ಯಕ್ಕಿಲ್ಲ.