ACB Raids: ಬೆಂಗ್ಳೂರಲ್ಲಿ ಅಖಾಡಕ್ಕಿಳಿದ ಎಸಿಬಿ ಅಧಿಕಾರಿಗಳು

*  ಬೆಂಗಳೂರಿನಲ್ಲಿ ಒಟ್ಟು 9 ಕಡೆ ದಾಳಿ 
*  ಬಿಡಿಎ ಬ್ರೋಕರ್‌ ಮೋಹನ್‌ ಅವರಿಗೆ ಸೇರಿದ ಮನೆ ಮೇಲೆ ರೇಡ್‌
*  ಬಿಡಿಎ ಮಧ್ಯವರ್ತಿಗಳು ಮತ್ತು ಏಜೆಂಟ್‌ರ ಮನೆ ಮೇಲೆ ದಾಳಿ 
 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.22): ಇಂದು(ಮಂಗಳವಾರ) ನಗರದ 9 ಕಡೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಡಿಎ ಮಧ್ಯವರ್ತಿಗಳು ಮತ್ತು ಏಜೆಂಟ್‌ರ ಮನೆ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 9 ಕಡೆ ದಾಳಿ ನಡೆಸಲಾಗಿದೆ. ಬಿಡಿಎ ಬ್ರೋಕರ್‌ ಮೋಹನ್‌ ಅವರಿಗೆ ಸೇರಿದ ಆರ್‌ಟಿ ನಗರ, ಮನುರಾಯನಪಾಳ್ಯದ ಮನೆ ಮೇಲೆ ದಾಳಿ ಮಾಡಲಾಗಿದೆ. ದೊಮ್ಮಲೂರಿನ ಮನೋಜ್‌, ಮಲ್ಲಪ್ಪಹಳ್ಳಿಯ ಮುನಿರತ್ನ, ಅರ್‌ಆರ್‌ನಗರದ ತೇಜಸ್ವಿ, ಮುದ್ದಿನಪಾಳ್ಯದ ಕೆಜಿ ಸರ್ಕಲ್‌ ಬಳಿ ಅಶ್ವತ್ಥ್ ಸೇರಿದಂತೆ ಮತ್ತಿತರರ ಮನೆ ಮೇಲೆ ಎಸಿದಿ ಅಧಿಕಾರಿಗಳು ರೇಡ್‌ ಮಾಡಿದ್ದಾರೆ. 

ACB Raids: ಬೆಂಗ್ಳೂರಲ್ಲಿ ಬೆಳ್ಳಂಬೆಳಿಗ್ಗೆ ಭ್ರಷ್ಟರ ಬೇಟೆ: 9 ಕಡೆ ದಾಳಿ

Related Video