Assembly election: ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ? ಎಚ್‌ಡಿಕೆ ಸುಳಿವು

ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿರುವ ಜನರೇ ನಿಖಿಲ್‌ನನ್ನು ದಡ ಸೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ರಾಮನಗರ (ಡಿ.15): ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸುಳಿವು ನೀಡಿದ್ದಾರೆ. ಈಗಾಗಲೇ ನಿಖಿಲ್‌ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡಲು ನನಗೆ ಯಾವುದೇ ಅಂಜಿಕೆಯಿಲ್ಲ. ನಿಖಿಲ್‌ನನ್ನು ದಡ ಸೇರಿಸುವುದು ಹೇಗೆ ಎಂಬ ಚಿಂತನೆಯಿಲ್ಲ. ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿರುವ ಜನರೇ ತೀರ್ಮಾನಿಸುತ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಅರು ರಾಮನಗರದಿಂದ ನಿಖಿಲ್‌ ಸ್ಪರ್ಧೆಯ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ. ರಾಜ್ಯದಲ್ಲಿ ನನ್ನ ಪಕ್ಷ 123 ಕ್ಷೇತ್ರದಲ್ಲಿ ಜಯಗಳಿಸಿ ಸ್ವತಂತ್ರವಾಗಿ ಆಡಳಿತಕ್ಕೆ ಬರಬೇಕು ಎನ್ನುವುದು ನನ್ನ ಗುರಿಯಾಗಿದೆ. ನಿಖಿಲ್‌ ಅಭ್ಯರ್ಥಿ ಆಗುವದರ ಬಗ್ಗೆ ನಮಗೆ ಅಂಜಿಕೆಯಿಲ್ಲ. ಸೂಕ್ತ ಸಂದರ್ಭದಲ್ಲಿ ನಿಖಿಲ್‌ ಅವರನ್ನು ಎಂಎಲ್‌ಎ ಮಾಡುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ...

Related Video