
ಕರ್ನಾಟಕಕ್ಕೆ 'ಬಸವರಾಜ' ಮೊದಲ ದಿನವೇ ಕಿಕ್ ಸ್ಟಾರ್ಟ್!
* ಕರ್ನಾಟಕದ 30ನೇ ಸಿಎಂ ಆಗಿ ಬಸವರಾಜ ಬೊಮ್ಮಾಯಿ
* ಮಂತ್ರಿಗಿರಿಗೆ ಬಗೆಬಗೆಯ ಸರ್ಕಸ್ ಶುರು
* ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಯುಗ ಆರಂಭ
* ಹೊಸ ಸಾರಥಿ ಮುಂದೆ ಸವಾಲುಗಳ ಸರಮಾಲೆ
ಬೆಂಗಳೂರು(ಜು. 29) ಕರ್ನಾಟಕದ 30ನೇ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ ಹೊಸ ರಾಜಕಾರಣದ ಶಕೆ ಆರಂಭವಾಗಿದೆ. ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಆಯ್ಕೆಯಾದ ನಂತರ ಸಚಿವ ಸ್ಥಾನದ ಆಕಾಂಕ್ಷಿಗಳು ಸಿಎಂ ಬಳಿ ದೌಡಾಯಿಸುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಧಿಕಾರ ಸ್ವೀಕರಿಸಿದ ಮೊದಲನೇ ದಿನ ಅಧಿಕಾರಿಗಳ ಸಭೆ ನಡೆಸಿದ ಬೊಮ್ಮಾಯಿ ಸ್ಪಷ್ಟ ಸೂಚನೆಗಳನ್ನು ಕೊಟ್ಟಿದ್ದಾರೆ. ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂದರ್ಶನದಲ್ಲಿ ಅನೇಕ ವಿಚಾರ ಹೇಳಿದ್ದಾರೆ.