Asianet Suvarna News Asianet Suvarna News

ನೂತನ ಸಿಎಂ ಬೊಮ್ಮಾಯಿಯವರಿಗೊಂದು ಎಸ್.ಎಂ. ಕೃಷ್ಣ ಪತ್ರ

* 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ
* ಬಸವರಾಜ ಬೊಮ್ಮಾಯಿಯವರಿಗೊಂದು ಪತ್ರ
* ಕರ್ನಾಟಕ ಕಂಡ  ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಅವರಿಂದ ಪತ್ರ

SM Krishna wishes To Basavaraj Bommai via Letter rbj
Author
Bengaluru, First Published Jul 28, 2021, 9:33 PM IST
  • Facebook
  • Twitter
  • Whatsapp

ಬೆಂಗಳೂರು, (ಜು.28): ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಇಂದು (ಜುಲೈ 28) ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಗೆ ಕರ್ನಾಟಕ ಕಂಡ  ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಪತ್ರದ ಮೂಲಕ ಶುಭ ಹಾರೈಸಿದ್ದಾರೆ. 

ಎಸ್.ಎಂ. ಕೃಷ್ಣ ತಮ್ಮ ಹಾಗೂ ಬಸವರಾಜ ಬೊಮ್ಮಾಯಿ ತಂದೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರೊಂದಿಗಿನ ಒಡನಾಟವನ್ನೂ ಪತ್ರದಲ್ಲಿ ಸ್ಮರಿಸಿಕೊಂಡಿದ್ದಾರೆ. ಪತ್ರದ ಸಾಲುಗಳು ಈ ಕೆಳಗಿನಂತಿವೆ. 

ನೂತನ ಸಿಎಂ ಬೊಮ್ಮಾಯಿಗೆ ಮಹತ್ವದ ಭರವಸೆ ನೀಡಿದ ಸಿದ್ದರಾಮಯ್ಯ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಗೆ ತುಂಬುಹೃದಯದ ಅಭಿನಂದನೆಗಳು. ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ನಾಡಿನ ಜನರ ಹಿತರಕ್ಷಣೆಗೆ ಕಟಿಬದ್ಧರಾಗಿ ಶ್ರೀ ಬಿ.ಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸುತ್ತೇನೆ.

ನಾನು ಮತ್ತು ನಿಮ್ಮ ತಂದೆಯವರು ಆತ್ಮೀಯ ಮಿತ್ರರಾಗಿದ್ದು ಶ್ರೀ ಎಸ್.ಆರ್ ಬೊಮ್ಮಾಯಿಯವರು ಹಲವು ಬಾರಿ ನನಗೆ ಮಾರ್ಗದರ್ಶಕರಾಗಿ, ಹಿತೈಷಿಗಳಾಗಿದ್ದು ನನ್ನ ಸ್ಮೃತಿ ಪಟಲದಲ್ಲಿದೆ. ಸಜ್ಜನ ಸೌಮ್ಯ ರಾಜಕಾರಣಿಯಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಸಂಬಂಧ ಹೊಂದಿದ್ದ ನಿಮ್ಮ ತಂದೆಯವರಂತೆ ತಾವು ಸಹ ಅವರ ದಾರಿಯಲ್ಲಿ ಮುನ್ನಡೆದು ಎಲ್ಲರ ವಿಶ್ವಾಸಗಳಿಸಿ ಯಶಸ್ವಿಯಾಗಿ ತಮ್ಮ ಆಡಳಿತ ನಡೆಸುವಂತಾಗಲಿ ಎಂದು ಎಸ್‌ಎಂ ಕೃಷ್ಣ ಶುಭಾ ಹಾರೈಸಿದ್ದಾರೆ. 

Follow Us:
Download App:
  • android
  • ios