ಚುನಾವಣೆ ಹೊತ್ತಿನಲ್ಲಿ ರಾಹುಲ್ ಗಾಂಧಿ ಮೊದಲ ರಾಜ್ಯ ಪ್ರವಾಸ!

ಚುನಾವಣೆ ಹೊತ್ತಿನಲ್ಲಿ ರಾಹುಲ್‌ ಗಾಂಧಿ ಕರ್ನಾಟಕ ಪ್ರವಾಸ ನಿಗದಿಯಾಗಿದೆ. ಮಾರ್ಚ್‌ 20ಕ್ಕೆ ಬೆಳಗಾವಿಯಲ್ಲಿ ರಾಹುಲ್‌ ಗಾಂಧಿ ರಣಕಹಳೆ ಊದಲಿದ್ದಾರೆ. ಪ್ರಧಾನಿ ಮೋದಿ, ಅಮಿತ್‌ ಶಾ ಬಳಿಕ ರಾಹುಲ್‌ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
 

First Published Mar 16, 2023, 11:10 PM IST | Last Updated Mar 16, 2023, 11:10 PM IST

ಬೆಂಗಳೂರು (ಮಾ.16): ರಾಜ್ಯದಲ್ಲಿ ಚುನಾವಣೆ ಸಿದ್ಧತೆ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಈಗಾಗಲೇ ಸಾಕಷ್ಟು ಬಾರಿ ರಾಜ್ಯಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರೂ, ಕಾಂಗ್ರೆಸ್‌ನಿಂದ ಅಂಥದ್ದೊಂದು ಕಾರ್ಯಕ್ರಮ ನಡೆದಿರಲಿಲ್ಲ. ಈಗ ರಾಹುಲ್‌ ಗಾಂಧಿ ಅವರ ಕರ್ನಾಟಕ ಪ್ರವಾಸ ನಿಗದಿಯಾಗಿದೆ.

ಮಾರ್ಚ್ 20ಕ್ಕೆ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಯುವ ಧ್ವನಿ ಹೆಸರಲ್ಲಿ ಸಮಾವೇಶ ನಡೆಯಲಿದೆ. ಈ ವೇಳೆ ರಾಹುಲ್‌ ಗಾಂಧಿ ಕಾಂಗ್ರೆಸ್‌ ಸರ್ಕಾರದ ನಾಲ್ಕನೇ ಗ್ಯಾರಂಟಿ ಘೋಷಣೆ ಮಾಡಲಿದ್ದಾರೆ. ಯುವಕರಿಗೆ ಉದ್ಯೋಗ ಭಾಗ್ಯ ಗ್ಯಾರಂಟಿ ಘೋಷಣೆ ಸಾಧ್ಯತೆ ಇದೆ.

Vijayapura: ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಹುಲ್ ಗಾಂಧಿ ರೋಡ್ ಷೋಗೂ ಕಾಂಗ್ರೆಸ್ ಯೋಜನೆ ರೂಪಿಸಿದೆ. ಆ ಮೂಲಕ ಮೋದಿ ರೋಡ್ ಷೋಗೆ ಕೌಂಟರ್ ಕೊಡಲು ‘ಕೈ’ ಚಿಂತನೆ ನಡೆಸಿದೆ.