Asianet Suvarna News Asianet Suvarna News

Vijayapura: ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ಭಾರತ ದೇಶದಲ್ಲಿ ಈಗ ಪ್ರಜಾತಂತ್ರ ವ್ಯವಸ್ಥೆ ಕುಸಿದಿದೆ. ಸಂವಿಧಾನಿಕ ಸಂಸ್ಥೆಗಳು ಮುಚ್ಚಲಾಗುತ್ತಿದೆ  ಎಂದು ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗ್ತಿದೆ.

Union Minister Sadhvi Niranjana Jyoti Slams On Rahul Gandhi At Vijayapura gvd
Author
First Published Mar 16, 2023, 11:02 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮಾ.16): ಭಾರತ ದೇಶದಲ್ಲಿ ಈಗ ಪ್ರಜಾತಂತ್ರ ವ್ಯವಸ್ಥೆ ಕುಸಿದಿದೆ. ಸಂವಿಧಾನಿಕ ಸಂಸ್ಥೆಗಳು ಮುಚ್ಚಲಾಗುತ್ತಿದೆ  ಎಂದು ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗ್ತಿದೆ. ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ‌ ನಡೆಸಿದ್ದಾರೆ. ಇತ್ತ ಸಮಾವೇಶದ ಬಳಿಕ ಉಡಿ ತುಂಬುವ ಕಾರ್ಯಕ್ರಮದಲ್ಲಿ ಬ್ಲೌಜ್‌ ಪೀಸ್‌ಗಾಗಿ ಮಹಿಳೆಯರು ಮುಗಿಬಿದ್ದ ಘಟನೆಯು ನಡೆಯಿತು.

ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ವಿಜಯಪುರ ನಗರದ ಆಶ್ರಮದ ರಸ್ತೆಯಲ್ಲಿ ಬಿಜೆಪಿ ಮಹಿಳಾ ಸಮಾವೇಶ ನಡೆಯಿತು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ರಾಹುಲ್ ಗಾಂಧಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.  ರಾಹುಲ್ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. 

Vijayapura: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಕಾರು ಅಪಘಾತ: ತಲೆ ಹಾಗೂ ಬಲಗಾಲಿಗೆ ಸಣ್ಣಪುಟ್ಟ ಗಾಯ

ಮಾಧ್ಯಮಗಳ ಎದುರು ರಾಹುಲ್ ಗಾಂಧಿ ವಿರುದ್ಧ ಸಿಡಿಮಿಡಿ: ವಿಜಯಪುರದಲ್ಲಿ ನಡೆದ ಬಿಜೆಪಿ‌ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಸಚಿವ ಸಾಧ್ವಿ ನಿರಂಜನ ಜ್ಯೋತಿ ಮಾಧ್ಯಮಗಳ ಜೊತೆಗೆ ಮಾತನಾಡಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ್ರು.‌ ಇದೇ ಭಾರತ ದೇಶದ ದೌರ್ಭಾಗ್ಯ ಮನೆ ಮಾತುಗಳನ್ನು ವಿದೇಶಿ ನೆಲದಲ್ಲಿ ನಿಂತಿ ಹೇಳಬಾರದಿತ್ತು. ಅವರ ಅಭಿಪ್ರಾಯ ಹೇಳಲೇ ಬೇಕಾಗಿದ್ದರೆ, ಸಂಸತ್ ಅಧಿವೇಶನವಿತ್ತು. ಅಲ್ಲಿ ಮುಕ್ತವಾಗಿ ಚರ್ಚೆ ನಡೆಸಬೇಕಾಗಿತ್ತು. ಅದು ಬಿಟ್ಟು ಈ ರೀತಿ ಮನೆಯ ಗುಟ್ಟನ್ನು ಜಗತ್ತಿಗೆ ಗೊತ್ತಾಗುವಂತೆ ಮಾಡಿರುವದು ಸರಿಯಲ್ಲ ಎಂದರು. 

ಇಂದಿರಾ ಗಾಂಧಿ ತರ್ತು ಪರಿಸ್ಥಿತಿ ಹೇರಿಕೆ ಪ್ರಶ್ನಿಸಿದ ಸಾಧ್ವಿ: ಈ ಹಿಂದೆ ಇದೇ ರಾಹುಲ್ ಗಾಂಧಿ ಅಜ್ಜಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು, ಆಗ ಪ್ರಜಾತಂತ್ರ ವ್ಯವಸ್ಥೆ ಕುಸಿದಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಿಕ್ಕ ದಂಗೆಯಲ್ಲಿ ಇಂದಿರಾಗಾಂಧಿ ಗೋಲಿಬಾರ್ ಮಾಡಿಸಿದ್ದಾಗ, ಗೋ ರಕ್ಷಣೆ ವಿಚಾರವಾಗಿ ಸಾಧು ಸಂತರು ಧ್ವನಿ ಎತ್ತಿದ್ದಾಗ ಅವರ ಮೇಲೆ ನಡೆಸಿದ ದೌರ್ಜನ್ಯ ದೇಶದ ಪ್ರಜಾತಂತ್ರ ವ್ಯವಸ್ಥೆ ಕುಸಿದಿರಲಿಲ್ಲವೇ? ಅಂದು ಆಗದ ನೋವು ರಾಹುಲ್ ಗೆ ಮೋದಿಯ ಅಭಿವೃದ್ಧಿ ಕಾರ್ಯ ಪ್ರಜಾತಂತ್ರ ವ್ಯವಸ್ಥೆ ಕುಸಿದಂತೆ ಕಾಣುತ್ತಿದೆ ಎಂದು ತಿರುಗೇಟು ನೀಡಿದರು. 

ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ತಿದೆ: ಮೋದಿಯ ಉತ್ತಮ ಕಾರ್ಯದಿಂದ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಅದನ್ನು ಮರೆಮಾಚಲು ಪ್ರಧಾನಿ ಮೋದಿ ಅವರ ತಾಯಿ ಅಷ್ಟೇ ಅಲ್ಲ ನಿಧನರಾಗಿರುವ ಅವರ ತಂದೆಯನ್ನು ಸಹ ಟೀಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಪ್ರಧಾನಿ ಮೋದಿ ಟಾರ್ಗೆಟ್ ಮಾಡಲು ಹೋಗಿ ವಿದೇಶದಲ್ಲಿ ದೇಶದ ಮರ್ಯಾದೆ ತೆಗೆಯುತ್ತಿರುವ ರಾಹುಲ್ ಗಾಂಧಿ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಸ್ವಾದಿ ನಿರಂಜನ ಜ್ಯೋತಿ ಆಗ್ರಹಿಸಿದರು.

ಎಲ್ಲರಿಗೂ ಮಾತನಾಡುವ ಹಕ್ಕು ಇದೆ: ಸ್ಥಳೀಯ ಶಾಸಕರು ತಮಗೆ ಮುಸ್ಲಿಂ ಮತ ಬೇಡ ಎಂದು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತಮಗೆ ಏನು ಗೊತ್ತಿಲ್ಲ ಗೊತ್ತಿಲ್ಲದ ವಿಷಯ ಬಗ್ಗೆ ಮಾತನಾಡುವದು ಸರಿಯಲ್ಲ ಅಂದರು. ದೇಶದಲ್ಲಿ ಹಿಂದು ಆಗಲಿ ಮುಸ್ಲಿಂ ಆಗಲಿ ಎಲ್ಲರಿಗೂ ಮಾತನಾಡುವ ಸ್ವತಂತ್ರವಿದೆ. ಪ್ರಧಾನಿ ಮೋದಿ ಜಾರಿಗೆ ತಂದಿರುವ ಕಿಸಾನ ಸನ್ಮಾನ ಯೋಜನೆ ದೇಶದ ಎಲ್ಲ ಫಲಾನುಭವಿಗಳಿಗೂ ದೊರೆಯುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ದಿಂದ ದೇಶದ ಎಲ್ಲ ಅರ್ಹ ಬಾಲಕಿಯರು ಈಗ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ ಅದನ್ನು ಎಲ್ಲರೂ ಸ್ವಾಗತಿಸಬೇಕು ಎಂದರು. 

ಬಿಜೆಪಿ ಮಹಿಳೆಗೆ ಹೆಚ್ಚು ಮಹತ್ವ ನೀಡ್ತಿದೆ: ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕರ್ನಾಟಕದ ಮಹಿಳೆ ಸದ್ಯ ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಮುಂದೆಯೂ ಮಹಿಳೆಗೆ ಹೆಚ್ಚಿನ ಮಹತ್ವ ನೀಡುವದು ಪ್ರಧಾನಿ ಮೋದಿ ಕನಸಾಗಿದೆ ಎಂದರು.

ಕಾಂಗ್ರೆಸ್‌ ಗೆಲ್ಲಲ್ಲ, ಅವರ ಗ್ಯಾರಂಟಿ ಕಾರ್ಡ್‌ ತಗೊಂಡು ಉಪ್ಪಿನಕಾಯಿ ಹಾಕಬೇಕೆ: ಸಿಎಂ ಬೊಮ್ಮಾಯಿ

ಬ್ಲೌಜ್ ಪೀಸ್‌ಗಾಗಿ ಮುಗಿಬಿದ್ದ ಮಹಿಳೆಯರು: ಸಮಾವೇಶದ ಬಳಿಕ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉಡಿತುಂಬಲು ನೀಡಲಾಗ್ತಿದ್ದ ಕೇಸರಿ, ಕೆಂಪು, ಹಸಿರು ಬ್ಲೌಜ್ ಪೀಸ್‌ಗಳಿಗಾಗಿ ಮಹಿಳೆಯರು ಮುಗಿಬಿದ್ದ ಘಟನೆಯು ನಡೆಯಿತು.

Follow Us:
Download App:
  • android
  • ios