News Hour: ಗುಜರಾತ್‌ ಚುನಾವಣೆ ಬಳಿಕ ಬಿಜೆಪಿಗೆ ಕರ್ನಾಟಕವೇ ಟಾರ್ಗೆಟ್‌!

ಗುಜರಾತ್‌ನಲ್ಲಿ ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮುಂದಿನ ಸೋಮವಾರ 2ನೇ ಹಾಗೂ ಕೊನೇ ಹಂತದ ಚುನಾವಣೆ ನಡೆಯಲಿದೆ. ಆ ಬಳಿಕ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಕರ್ನಾಟಕ ಚುನಾವಣೆಯೇ ನಂ1 ಟಾರ್ಗೆಟ್‌ ಆಗಿರಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.30): ಕರ್ನಾಟಕದ ಚುನಾವಣಾ ಕಣ ಡಿಸೆಂಬರ್‌ನಲ್ಲಿ ರಂಗೇರುವುದು ಬಹುತೇಕ ನಿಶ್ಚಯವಾಗಿದೆ. ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳು ಮುಗಿದ ಬೆನ್ನಲ್ಲಿಯೇ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಬಿಜೆಪಿ ಕರ್ನಾಟಕವನ್ನು ತನ್ನ ಟಾರ್ಗೆಟ್‌ ಮಾಡಿಕೊಳ್ಳಲಿದೆ. ಅಮಿತ್‌ ಶಾ ಟೀಂ ಮುಂದಿನ ತಿಂಗಳು ಕರ್ನಾಟಕಕ್ಕೆ ಆಗಮಿಸಲಿದೆ.

2023ರ ಚುನಾವಣೆಗೆ ಬಿಜೆಪಿಯ ಅಜೆಂಡಾ ಏನು ಎನ್ನುವುದು ಬೆಂಗಳೂರಿನಲ್ಲಿ ನಿರ್ಧಾರವಾಗಲಿದೆ. ಡಿಸೆಂಬರ್ 10 ರ ಬಳಿಕ ರಾಜ್ಯಕ್ಕೆ ಅಮಿತ್ ಶಾ ಟೀಂ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಬೆಂಗಳೂರಲ್ಲೇ ವಾರ್ ರೂಂ ಸ್ಥಾಪಿಸಿ ಚುನಾವಣೆ ಲೆಕ್ಕಾಚಾರ ಮಾಡಲಾಗುತ್ತದೆ.

Karnataka Assembly Election: ಬಂಡಾಯದ ನೆಲದಲ್ಲಿ ಚುನಾವಣೆ ರಂಗು

ಚುನಾವಣಾ ಉಸ್ತುವಾರಿಗಾಗಿ ಅಮಿತ್‌ ಶಾ ತಂಡವನ್ನು ನೇಮಕ ಮಾಡಲಿದ್ದಾರೆ. ಡಿಸೆಂಬರ್ನಿಂದ ಬಿಜೆಪಿ ಚುನಾವಣೆ ಜವಾಬ್ದಾರಿಯನ್ನು ಕೇಂದ್ರ ಟೀಮ್‌ ವಹಿಸಿಕೊಳ್ಳಲಿದೆ. ಕೇಂದ್ರದ ಟೀಮ್‌ ನೇರವಾಗಿ ಅಮಿತ್‌ ಶಾ ಅವರಿಗೆ ರಿಪೋರ್ಟ್‌ ಮಾಡಿಕೊಳ್ಳಲಿದೆ. ವಾರ್ ರೂಂ ಮೂಲಕ ರಾಜ್ಯ ಬಿಜೆಪಿಯನ್ನು ಅಮಿತ್‌ ಶಾ ಹಿಡಿತಕ್ಕೆ ತಂದುಕೊಲ್ಳಲಿದ್ದಾರೆ.

Related Video