ಮತದಾರರನ್ನು ಸೆಳೆಯಲು 'ತ್ರಿ' ಪಕ್ಷಗಳು ಪ್ಲಾನ್: ರಾಜ್ಯದಲ್ಲಿ ಶುರುವಾಯ್ತು ಗಿಫ್ಟ್ ಪಾಲಿಟಿಕ್ಸ್
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಗೆಲ್ಲಲು ಮೂರು ಪಕ್ಷಗಳು ಕಸರತ್ತು ನಡೆಸಿದ್ದು, ಮತದಾರರನ್ನು ಸೆಳೆಯಲು ಗಿಫ್ಟ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಎಲೆಕ್ಷನ್ ಸಂಚಾರ ಶುರುವಿಟ್ಟುಕೊಂಡಿವೆ. ರಾಜ್ಯದಲ್ಲಿ ಫ್ರೀ ಹಬ್ಬ ಶುರುವಾಗಿದೆ. ಬೆಂಗಳೂರಿನಲ್ಲೂ ಈ ಕುಕ್ಕರ್ ಹಬ್ಬ ಜೋರಾಗಿನೇ ನಡೆಯುತ್ತಿದೆ. ಘಟಾನುಘಟಿ ನಾಯಕರುಗಳೇ ನಿಂತು ಪ್ರಜೆಗಳಿಗೆ ಫ್ರೀ ಕುಕ್ಕರ್ ಹಂಚುತ್ತಿದ್ದಾರೆ. ಮತದಾರರು ವೋಟನ್ನು ನಮಗೇ ಹಾಕಬೇಕೆಂಬ ಆಸೆಯಿಂದ ಆಕಾಂಕ್ಷಿ ಅಭ್ಯರ್ಥಿಗಳು ಈಗ ಫ್ರೀ ಹಬ್ಬವನ್ನು ಶುರುವಿಟ್ಟುಕೊಂಡಿದ್ದಾರೆ.