ಮೋದಿ Vs ಸಿದ್ದು ಕಾಳಗ: ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲವೆಂದ ಪ್ರಧಾನಿ

ಮಧ್ಯಪ್ರದೇಶ ರಣರಂಗದಲ್ಲಿ ಪ್ರಧಾನಿ ಮೋದಿ ಸ್ಫೋಟಕ ಮಾತು..!
ತಿರುಗಿ ಬಿದ್ದ ಸಿದ್ದರಾಮಯ್ಯ.. ಮೋದಿ ವಿರುದ್ಧ ಟಗರು ಗುಟುರು..!
ಅಂದು "ಸೀದಾರುಪಯ್ಯ" ಅಂದಿದ್ದರು ಪ್ರಧಾನಿ ನರೇಂದ್ರ ಮೋದಿ..!

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ( Siddaramaiah) ನಡುವಿನ ರಾಜಕೀಯ ಜಿದ್ದಾಜಿದ್ದಿ ಇವತ್ತು ನಿನ್ನೆಯದ್ದಲ್ಲ. ಇದು ಮೋದಿ ಪ್ರಧಾನಿಯಾದ ದಿನದಿಂದ ಶುರುವಾಗಿರೋ ಜಟಾಪಟಿ. ಕರ್ನಾಟಕಕ್ಕೆ ಬಂದಾಗ ಸಿದ್ದರಾಮಯ್ಯನವರ ವಿರುದ್ಧ ಮೋದಿ(Narendra Modi) ಅಬ್ಬರಿಸೋದು, ಮೋದಿ ಮಾತಿನೇಟಿಗೆ ಅಷ್ಟೇ ತೀಕ್ಷ್ಣವಾಗಿ ಸಿದ್ದರಾಮಯ್ಯ ತಿರುಗೇಟು ಕೊಡೋದು. ಇದನ್ನೆಲ್ಲಾ ಇಡೀ ರಾಜ್ಯವೇ ನೋಡಿದೆ. ಈಗ ಇಬ್ಬರ ಮಧ್ಯೆ ಶುರುವಾಗಿರೋದು ಮತ್ತೊಂದು ಸುತ್ತಿನ ಯುದ್ಧ. ಈ ಬಾರಿ ಸಿದ್ದರಾಮಯ್ಯನವ್ರಿಗೆ ದೂರದ ಮಧ್ಯಪ್ರದೇಶದಲ್ಲಿ(Madyapradesh) ಮೋದಿ ಟಕ್ಕರ್ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರದ್ದು ಸುಲಿಗೆ ಸರ್ಕಾರ ಅಂತ ಕರೆದಿದ್ದಾರೆ. ಕರ್ನಾಟಕದ(Karnataka) ಸಿಎಂ ಮತ್ತು ಡಿಸಿಎಂ ಸೇರಿಕೊಂಡು ರಾಜ್ಯವನ್ನು ಸುಲಿಗೆ ಮಾಡ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಷ್ಟೇ ಅಲ್ಲ, ಕಾಂಗ್ರೆಸ್ ಸರ್ಕಾರದ ವಿರುದ್ಧ, ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ವಿರುದ್ಧ ಸುಲಿಗೆಯ ಆರೋಪ ಮಾಡಿರೋ ಪ್ರಧಾನಿ ಮೋದಿ ವಿರುದ್ಧ ಕೈ ಸರ್ಕಾರದ ಮಂತ್ರಿಗಳೂ ಕಿಡಿ ಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಲಿಟಲ್ ಬಾಯ್, ಫ್ಯಾಟ್ ಮ್ಯಾನ್‌ಗಿಂತಾ 24 ಪಟ್ಟು ದೊಡ್ಡ ಬಾಂಬ್! ಬಿ61-13 ರಹಸ್ಯವೇನು..? ಏನಿದರ ಉದ್ದೇಶ..?

Related Video