Asianet Suvarna News Asianet Suvarna News

Narendra Modi: ಬಹುಮತ ಪಡೆಯದ ಬಿಜೆಪಿ, ಎಡವಟ್ಟಾಗಿದ್ದೆಲ್ಲಿ..? ಕಮಲಾಧಿಪತಿಗಳ ಕಣ್ಣಿಗೆ ಕಾಣಲಿಲ್ವಾ ಆ ವಿಚಿತ್ರ ಲೆಕ್ಕಾಚಾರ..?

ಕೇಸರಿ ಪಾಳಯಕ್ಕೆ ಯು.ಪಿಲಿ ಭಾರೀ ಹಿನ್ನಡೆ!
ಯೋಗಿ ನಾಡಲ್ಲಿ ಗೆದ್ದು ಬೀಗಿದ I.N.D.I.A..!
ಅಯೋಧ್ಯೆಯ ಕ್ಷೇತ್ರದಲ್ಲೂ ಬಿಜೆಪಿಗೆ ಹಿನ್ನಡೆ!

ಅಂತೂ ಇಂತೂ ದೇಶದ ಜನ ನೀಡಿದ್ದ ಅಂತಿಮ ಫಲಿತಾಂಶ ಈಗ ಹೊರಬಂದಿದೆ. ಬಿಜೆಪಿ(BJP) ನೇತೃತ್ವದ ಕೇಸರಿ ಪಾಳಯಕ್ಕೆ, ಬಹುಮತವೇನೋ ಸಿಕ್ಕಾಗಿದೆ. ಕಾಂಗ್ರೆಸ್(Congress) ಕೂಡ ಕಳೆದ ಎರಡು ಚುನಾವಣೆಗಿಂತಲೂ ಅಧಿಕ ಸ್ಥಾನ ಳಿಸಿದೆ. ಈ ಸಲ ತಾನೂ ಕೂಡ ಸರ್ಕಾರ ರಚನೆ ಮಾಡೋ ತೋಳ್ಬಲ ಹೊಂದಿದ್ದೀನಿ ಅಂತ ಹೇಳ್ತಾ ಇದೆ. ದೇಶದ ಜನರಂತು, ಇನ್ನೂ ಹಲವು ಗಂಟೆಗಳಲ್ಲಿ ಅದೇನೇನು ವಿಚಿತ್ರಗಳು ನಡೆಯಲಿವೆಯೋ  ಅನ್ನೋ ಯೋಚನೆಗೆ ಬಿದ್ದಿದ್ದಾರೆ. ಪ್ರಧಾನಿ ಮೋದಿ(Narendra Modi) ಅವರು, ಅಬ್ ಕಿ ಬಾರ್, ಚಾರ್ ಸೌ ಪಾರ್ ಅನ್ನೋ ರಣಘೋಷ ಮೊಳಗಿಸಿ ರಣಾಂಗಣಕ್ಕೆ ಪ್ರವೇಶಿಸಿದ್ರು. ಆದ್ರೆ, ಈಗ ನೋಡಿದ್ರೆ ಆ ನಂಬರ್‌ಗಿಂತಾ ಆಲ್ ಮೋಸ್ಟ್ ನೂರು ಸ್ಥಾನ ಕಡಿಮೆ ಇದೆ. ಅಷ್ಟೇ ಅಲ್ಲ, ಮಿತ್ರಪಕ್ಷಗಳ ಸಹಕಾರವಿಲ್ಲದೆ ಸ್ವಂತ ಸರ್ಕಾರ ನಡೆಸೋದೂ ಕೂಡ ಕಷ್ಟವಾಗಿದೆ. ಇದೇ ಮೊದಲ ಬಾರಿಗೆ, ಮೋದಿ ಸೇನೆ, ಬಹುಮತಕ್ಕಿಂತಾ ಕಡಿಮೆ ಸ್ಥಾನಗಳಿಸಿದೆ. ಬಿಜೆಪಿ ಮಿತ್ರ ಪಕ್ಷಗಳ ತೊಳ್ಬಲ ಈಗ ದುಪ್ಪಟ್ಟಾಗಿದೆ. ಅಸಲಿಗೆ, 303 ಸ್ಥಾನ ಗೆದ್ದುಬೀಗಿದ್ದ ಬಿಜೆಪಿ, ಈಗ ಸರಳ ಬಹುಮತ ಪಡೆಯೋಕೂ ಸಾಧ್ಯವಾಗಿಲ್ಲ.

ಇದನ್ನೂ ವೀಕ್ಷಿಸಿ:  ಬಿಜೆಪಿಯಲ್ಲಿ ಗಟ್ಟಿ ನಿರ್ಧಾರದ ನಾಯಕರು ಇಲ್ಲ, ಸ್ಥಳೀಯವಾಗಿ ಗ್ರೌಂಡ್ ರಿಪೋರ್ಟ್‌ ತಗೊಳ್ತಾಯಿಲ್ಲ: ಕರಡಿ ಸಂಗಣ್ಣ