Asianet Suvarna News Asianet Suvarna News

ನರೇಂದ್ರ ಮೋದಿಯ ಅಷ್ಟ ರಹಸ್ಯ..ಏನಿದು ಸೀಕ್ರೆಟ್ 8!

8 ಶತ್ರುಗಳು.. 8 ಮಿತ್ರರು..8 ಸ್ಟ್ರಾಟಜಿ.. 8 ಮಾಸ್ಟರ್ ಸ್ಟ್ರೋಕ್.. ಏನಿದು ಸೀಕ್ರೆಟ್ 8? ವಿದೇಶಿ ನಾಯಕರಿಗೆ ಗಿಫ್ಟ್ ಕೊಟ್ಟೇ ಮೋದಿ ಬದಲಿಸಿದರಾ ರಾಜತಂತ್ರದ ನಸೀಬತ್ತು..? ಏನದು ಮೋದಿ ಮ್ಯಾಜಿಕ್..? ಮೋದಿ ಯುಗಕ್ಕೆ 8 ವರ್ಷ.. ಅಷ್ಟರಲ್ಲೇ ಬದಲಾಗಿದ್ದೆಷ್ಟು ಗೊತ್ತಾ..?

ಬೆಂಗಳೂರು (ಮೇ. 27): ಮೋದಿ (Narendra Modi) ಅವರ ಈ ಜಾಣ ನಡೆಯೇ ಅವರನ್ನ ವರ್ಲ್ಡ್ ಲೀಡರ್ ಅನ್ನೋ ಮಟ್ಟಕ್ಕೆ ತಂದು ನಿಲ್ಲಿಸಿರೋದು.. ಆದ್ರೆ, ಈ ನಾಯಕನ ಮುಂದೆಯೂ ಸವಾಲುಗಳಿದ್ದಾವೆ.. ಅದೇನು ಅನ್ನೋದು ಗೊತ್ತಿದೆಯೇ?

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 8 ವರ್ಷಗಳು (8 Years) ಕಳೆದಿವೆ.. ಆದ್ರೆ, ಈ 8 ವರ್ಷಗಳಲ್ಲಿ ಭಾರತ ಗಳಿಸಿದ್ದೆಷ್ಟು, ಕಳೆದುಕೊಂಡಿದ್ದೆಷ್ಟು. ಇದೆಲ್ಲಕ್ಕಿಂತಾ ಮುಖ್ಯವಾಗಿ, ಮೋದಿ ಅವರು ತಮ್ಮ ಮುಂದಿರೋ ಸವಾಲುಗಳನ್ನ ಹೇಗೆ  ನಿಭಾಯಿಸ್ತಾರೆ ಅನ್ನೋದೇ ಇಂಪಾರ್ಟಂಟ್. ಮೋದಿ ಅವರ ರಾಜತಾಂತ್ರಿಕ ನಿಲುವುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲೇ ಕೌತುಕ ಮೂಡಿರುತ್ತೆ.. ಇಂಥಾ ಮೋದಿ ಅವರ ಮುಂದಿನ ಸವಾಲುಗಳು ಏನು ಗೊತ್ತಾ..?

ಜಿಟಿ ದೇವೆಗೌಡ ಮೊಮ್ಮಗಳ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ!

ಸರಿಯಾಗಿ ಎಂಟು ವರ್ಷಗಳ ಹಿಂದೆ, ನರೇಂದ್ರ ಮೋದಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯವನ್ನು ದಾಖಲಿಸಿದ ಬಳಿಕ, ದೆಹಲಿಯಲ್ಲಿ ನಡೆದ ಅದ್ಭುತ ಸಮಾರಂಭದಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ 15 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕೇಂದ್ರದಲ್ಲಿ ಮೋದಿಯವರ ಆಯ್ಕೆಯು ವಿಶೇಷವಾಗಿ ಮಹತ್ವದ್ದಾಗಿತ್ತು, 3 ದಶಕಗಳಲ್ಲಿ ಮೊದಲ ಬಾರಿಗೆ ಒಂದೇ ಪಕ್ಷವು ಕೇಂದ್ರದಲ್ಲಿ ಸರ್ಕಾರ ರಚಿಸಲು ಬಹುಮತದ ಸ್ಥಾನಗಳನ್ನು ಗೆದ್ದಿತ್ತು.

Video Top Stories