
Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
2025ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ, ಆರ್ಥಿಕ ಮತ್ತು ವಿದೇಶಾಂಗ ನೀತಿಗಳಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಸಂಬಂಧ, ಜಿಎಸ್‌ಟಿ 2.0 ನಂತಹ ಆರ್ಥಿಕ ಸುಧಾರಣೆಗಳು ಮತ್ತು ಚುನಾವಣಾ ಗೆಲುವುಗಳು ಅವರ ಚಾಣಕ್ಯ ನಡೆಯನ್ನು ಪ್ರದರ್ಶಿಸುತ್ತವೆ.
ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ ಭಾರತದ ಆರ್ಥಿಕತೆ. ಹಾಗಿದ್ರೆ ಯಾವುದು ಆ ಕ್ಷಣ..? ಆರ್ಥಿಕ ಕ್ಷೇತ್ರದಲ್ಲಿ ಭಾರತ ಸಾಧಿಸಿದ್ದೇನು? ದೇಶದ ಆರ್ಥಿಕತೆಯನ್ನ ಮತ್ತಷ್ಟು ಬಲಿಷ್ಠಗೊಳಿಸೋ ನಿಟ್ಟಿನಲ್ಲಿ ಪ್ರಯತ್ನಿಸ್ತಲೇ ಇದ್ದಾರೆ ಪ್ರಧಾನಿ ಮೋದಿ. ಅವರ ಈ ಪ್ರಯತ್ನಕ್ಕೆ 2025ರಲ್ಲಿ ಒಂದು ಹಂತದ ಯಶಸ್ಸು ಸಿಕ್ಕಿದೆ. ಹಾಗಿದ್ರೆ ಆ ಸಕ್ಸಸ್ ಏನು..? ಅದ್ರ ಹಿಂದಿನ ಪ್ರಯತ್ನ ಹೇಗಿದೆ.?