ಸಂಬರಗಿ ಪರ ಕಟೀಲ್ ಬ್ಯಾಂಟಿಂಗ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಡ್ರಗ್ ಮಾಫಿಯಾ ವಿರುದ್ಧ ಬಹಳ ಪ್ರಬಲವಾಗಿ ಧ್ವನಿ ಎತ್ತಿದವರು ಪ್ರಶಾಂತ್ ಸಂಬರಗಿ. ನಟಿ ಸಂಜನಾ ಜೊತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಶ್ರೀಲಂಕಾಗೆ ಹೋಗಿದ್ದರು ಎಂದು ಆರೋಪ ಮಾಡಿದ್ದರು. ಇದೀಗ ಸಂಬರಗಿ ವಿರುದ್ಧ ಜಮೀರ್ ಅಹ್ಮದ್ ಕೇಸ್ ಹಾಕಿದ್ದಾರೆ. ಡ್ರಗ್ ಕೇಸ್‌ ಬಗ್ಗೆ ಕಾಂಗ್ರೆಸ್ ಜಾಣ ಮೌನಕ್ಕೆ ಶರಣಾಗಿದೆ. 

First Published Sep 11, 2020, 5:16 PM IST | Last Updated Sep 11, 2020, 5:20 PM IST

ಬೆಂಗಳೂರು (ಸೆ. 11): ಡ್ರಗ್ ಮಾಫಿಯಾ ವಿರುದ್ಧ ಬಹಳ ಪ್ರಬಲವಾಗಿ ಧ್ವನಿ ಎತ್ತಿದವರು ಪ್ರಶಾಂತ್ ಸಂಬರಗಿ. ನಟಿ ಸಂಜನಾ ಜೊತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಶ್ರೀಲಂಕಾಗೆ ಹೋಗಿದ್ದರು ಎಂದು ಆರೋಪ ಮಾಡಿದ್ದರು. ಇದೀಗ ಸಂಬರಗಿ ವಿರುದ್ಧ ಜಮೀರ್ ಅಹ್ಮದ್ ಕೇಸ್ ಹಾಕಿದ್ದಾರೆ. ಡ್ರಗ್ ಕೇಸ್‌ ಬಗ್ಗೆ ಕಾಂಗ್ರೆಸ್ ಜಾಣ ಮೌನಕ್ಕೆ ಶರಣಾಗಿದೆ. 

ಮೆಕ್ಯಾನಿಕ್ ಟು ಮಾಫಿಯಾ ಡಾನ್; ಯಾವ ಸೆಲಬ್ರಿಟಿಗೂ ಕಮ್ಮಿಯಿಲ್ಲ ಜಮೀರ್ ಆಪ್ತ ಶೇಖ್!

ಕಾಂಗ್ರೆಸ್ ಧೋರಣೆಯನ್ನು ನಳೀನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ. ಕಾಂಗ್ರೆಸ್ ಪ್ರತ್ಯಕ್ಷವಾಗಿಲ್ಲದಿದ್ದರೂ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.  ಪ್ರಶಾಂತ್ ಸಂಬರಗಿ ಪರ ಬ್ಯಾಟಿಂಗ್ ಮಾಡಿದ್ದಾರೆ.