ಅಫಜಲಪುರ 'ಕೈ' ಟಿಕೆಟ್'ಗಾಗಿ ಸಹೋದರರ ಪೈಪೋಟಿ

ಕಲಬುರಗಿ ಅಖಾಡದಲ್ಲಿ ಕಾಂಗ್ರೆಸ್‌ ಟಿಕೆಟ್‌ ಫೈಟ್‌ ಜೋರಾಗಿದ್ದು, ಅಫಜಲಪುರ ಕ್ಷೇತ್ರದಲ್ಲಿ ಸಹೋದರರ ಸವಾಲ್‌ ಏರ್ಪಟ್ಟಿದೆ.

Share this Video
  • FB
  • Linkdin
  • Whatsapp

ಅಫಜಲಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಸಹೋದರರ ನಡುವೆ ಕಾಳಗ ಏರ್ಪಟ್ಟಿದೆ. ಹಾಲಿ ಶಾಸಕ ಎಂ.ವೈ ಪಾಟೀಲ್‌ ಕಣದಿಂದ ಹಿಂದೆ ಸರಿಯುವ ಮಾತನಾಡಿದ್ದು, ಅವರ ಮಕ್ಕಳ ನಡುವೆ ಇದೀಗ ಟಿಕೆಟ್ ವಾರ್‌ ನಡೆದಿದೆ. ಅಪ್ಪನ ನಿವೃತ್ತಿ ಬೆನ್ನಲೇ ಅಫಜಲಪುರ ಅಖಾಡದಲ್ಲಿ ಸಹೋದರಾದ ಅರುಣ್‌ ಕುಮಾರ್‌ ಪಾಟೀಲ್‌ ಹಾಗೂ ಸಂಜೀವ್‌ ಕುಮಾರ್‌ ಪಾಟೀಲ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಟಿಕೆಟ್‌ಗಾಗಿ ಇಬ್ಬರೂ ಅರ್ಜಿ ಸಲ್ಲಿಸಿದ್ದು, ಲಾಬಿ ನಡೆಸಿದ್ದಾರೆ. ಇನ್ನು ಕಾಂಗ್ರೆಸ್‌ ಐವರು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ ಆಗಿದೆ.

Related Video