ಸ್ವಾಭಿಮಾನ, ಗೌರವದಿಂದ ಸಂಪುಟ ಸೇರಲ್ಲ: ಶೆಟ್ಟರ್‌

* BSY ಸಿಎಂ ಆಗಿದ್ದಾಗ ನಾನು ಸಚಿವನಾಗಿದ್ದೆ, ಆಗ ಸಚಿವನಾಗಲು ಮುಜುಗರ ಇರಲಿಲ್ಲ
* ಈಗ ಯಾರೇ ಸಿಎಂ ಆಗಿದ್ರೂ ನಾನು ಸಂಪುಟ ಸೇರತಿರಲಿಲ್ಲ
* ನನ್ನ ನಿರ್ಧಾರವನ್ನ ಸಿಎಂ ಮತ್ತು ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆ 

First Published Jul 29, 2021, 4:30 PM IST | Last Updated Jul 29, 2021, 4:30 PM IST

ಬೆಂಗಳೂರು(ಜು.29): ಸ್ವಾಭಿಮಾನ, ಗೌರವದ ಹಿನ್ನೆಲೆಯಲ್ಲಿ ಸಂಪುಟದಿಂದ ದೂರು ಉಳಿಯಲು ನಿರ್ಧರಿಸಿದ್ದೇನೆ ಅಂತ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನು ಸಚಿವನಾಗಿದ್ದೆ, ಆಗ ಸಚಿವನಾಗಲು ಮುಜುಗರ ಇರಲಿಲ್ಲ, ಈಗ ಯಾರೇ ಸಿಎಂ ಆಗಿದ್ರೂ ನಾನು ಸಂಪುಟ ಸೇರತಿರಲಿಲ್ಲ. ನನ್ನ ನಿರ್ಧಾರವನ್ನ ಮುಖ್ಯಮಂತ್ರಿ ಮತ್ತು ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆ ಅಂತ ಹೇಳಿದ್ದಾರೆ. 

ಸಂಪುಟದಿಂದ ದೂರ ಉಳಿಯಲು ಶೆಟ್ಟರ್‌ ನಿರ್ಧಾರ: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು