ಸಂಪುಟದಿಂದ ದೂರ ಉಳಿಯಲು ಶೆಟ್ಟರ್‌ ನಿರ್ಧಾರ: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

* ಶೆಟ್ಟರ್‌ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ
* ಖುದ್ದಾಗಿ ಶೆಟ್ಟರ್‌ ಅವರನ್ನ ಭೇಟಿಯಾಗಿ ಮಾತನಾಡುತ್ತೇನೆ
* ಶೆಟ್ಟರ್‌ ನಾನು ಆತ್ಮೀಯ ಸ್ನೇಹಿತರು, ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇದೆ 
 

First Published Jul 29, 2021, 3:40 PM IST | Last Updated Jul 29, 2021, 3:40 PM IST

ಹುಬ್ಬಳ್ಳಿ(ಜು.29): ಸಂಪುಟದಿಂದ ದೂರ ಉಳಿಯಲು ಜಗದೀಶ್‌ ಶೆಟ್ಟರ್‌ ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೆಟ್ಟರ್‌ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ, ಶೆಟ್ಟರ್‌ ಅವರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.  ಖುದ್ದಾಗಿ ಶೆಟ್ಟರ್‌ ಅವರನ್ನ ಭೇಟಿಯಾಗಿ ಮಾತನಾಡುತ್ತೇನೆ. ಶೆಟ್ಟರ್‌ ನಾನು ಆತ್ಮೀಯ ಸ್ನೇಹಿತರು, ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇದೆ. ರಾಜಕೀಯ ಪ್ರವೇಶಕ್ಕಿಂತ ಮುಂಚೆಯೇ ನಾವು ಒಳ್ಳೆಯ ಸ್ನೇಹಿತರಾಗಿದ್ದವರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬೊಮ್ಮಾಯಿ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ: ಉಮೇಶ್‌ ಕತ್ತಿ