ರೌಡಿ ರಾಜಕಾರಣಿಗೆ ಜೈಲಲ್ಲೇ ನಿಂತ ಹಾರ್ಟ್‌, ವಿಷ ಹಾಕಿ ಕೊಲ್ಲಿಸಿದರಾ ಉತ್ತರ ಪ್ರದೇಶ ಪೊಲೀಸರು..?

ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ ಡಾನ್ ಆದ ರೀತಿಯೇ ವಿಚಿತ್ರ. ಮುಖ್ತಾರ್‌ ಅನ್ಸಾರಿ ಹೆಸರು ಇಂದು ಮುಗಿದು ಹೋದ ಅಧ್ಯಾಯ. 63 ಕ್ರಿಮಿನಲ್ ಕೇಸ್.. ಅದರಲ್ಲಿ 15 ಮರ್ಡರ್ ಕೇಸ್. ಸತ್ತಿದ್ದು ಹೃದಯಾಘಾತದಿಂದಲೋ.. ವಿಷಪ್ರಾಶನದಿಂದಲೋ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
 

First Published Mar 30, 2024, 2:45 PM IST | Last Updated Mar 30, 2024, 2:46 PM IST

ನವದೆಹಲಿ (ಮಾ.30):  ಒಬ್ಬ ಡಾನ್ ಸತ್ತರೆ, ರೌಡಿ ಸತ್ತರೆ ಅದು ನ್ಯಾಷನಲ್ ಸುದ್ದಿಯಾಗೋದ್ಯಾಕೆ ಅಂದ್ರೆ, ಆತನ ಹಿಂದಿನ ರಕ್ತಚರಿತ್ರೆ ಹಾಗಿರುತ್ತೆ. ಅಂತಹ ಒಬ್ಬ ಡಾನ್, ಉತ್ತರ ಪ್ರದೇಶದ ಜೈಲಿನಲ್ಲಿ ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾನೆ. ಅವನನ್ನು ವಿಷ ಹಾಕಿ ಕೊಂದಿದ್ದಾರೆ ಅನ್ನೋದು ಅವರ ಫ್ಯಾಮಿಲಿಯವರ ಕಂಪ್ಲೇಂಟ್. 

ಹೌದು ಮುಖ್ತಾರ್‌ ಅನ್ಸಾರಿ ಹೃದಯಾಘಾತದಿಂದಲೇ ಸಾವು ಕಂಡಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಇವನ ಮೇಲೆ ಇದ್ದಿದ್ದು ಬರೋಬ್ಬರಿ 63 ಕ್ರಿಮಿನಲ್‌ ಕೇಸ್‌. ಅದರಲ್ಲಿ 15 ಮರ್ಡರ್‌ ಕೇಸ್‌ಗಳು. ಸತ್ತಿದ್ದು ಹೃದಯಾಘಾತದಿಂದಲೋ.. ವಿಷಪ್ರಾಶನದಿಂದಲೋ ಎನ್ನುವ ಅನುಮಾನ ವ್ಯಕ್ತವಾಗಿದೆ.

ತಮ್ಮನನ್ನು ಸೋಲಿಸಿದ್ದಕ್ಕೆ ನಡುರಸ್ತೆಯಲ್ಲೇ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಮಾಡಿದ್ದ ಮುಖ್ತಾರ್‌ ಅನ್ಸಾರಿ!

5 ಬಾರಿ ಗೆದ್ದಿದ್ದ ಅನ್ಸಾರಿ, ಬಿಜೆಪಿ ಶಾಸಕನನ್ನು ರಸ್ತೆಯಲ್ಲೇ ಕೊಲ್ಲಿಸಿದ್ದ. ಅನ್ಸಾರಿ ಹೆಸರು ಕೇಳಿದ್ರೆ ಉ.ಪ್ರದೇಶ ಪೊಲೀಸರೇ ಒಂದು ಕಾಲದಲ್ಲಿ ನಡಗುತ್ತಿದ್ದರು. ಸಿನಿಮಾಗಳಂತೆಯೇ ನಡೆಯುತ್ತಿತ್ತು ಅನ್ಸಾರಿ ಗೂಂಡಾಗಿರಿ. ಆದರೆ, ಯೋಗಿ ಸಿಎಂ ಆದ ಮೇಲೆ ಇಡೀ ಉತ್ತರ ಪ್ರದೇಶದ ಚಹರೆಯೇ ಬದಲಾಗಿ ಹೋಗಿದೆ.