ಇಂದು ಅಮಿತ್‌ ಶಾ ಭೇಟಿಯಾಗಲಿರುವ ರೆಬೆಲ್‌ ಲೇಡಿ: ಸುಮಲತಾಗೆ ಯಾವ ಕ್ಷೇತ್ರ ಇಂದೇ ನಿರ್ಧಾರ ?

ಜೆಡಿಎಸ್‌ ಮಂಡ್ಯಕ್ಕೆ ಪಟ್ಟು ಹಿಡಿದ್ರೆ, ಸಂಸದೆ ಸುಮಲತಾ ಮಾತ್ರ ನಾನು ಬೇರೆ ಕಡೆ ಎಲ್ಲೂ ಸ್ಫರ್ಧಿಸಲ್ಲ ಎನ್ನುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ಇತ್ತ ಮಂಡ್ಯದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ(MP Sumalatha) ಕ್ಷೇತ್ರ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ. ಇಂದು ಅಮಿತ್ ಶಾ(Amit Shah) ಭೇಟಿಯಾಗಲಿರುವ ಸುಮಲತಾ ಎದುರು ಚಿಕ್ಕಬಳ್ಳಾಪುರದಿಂದ(Chikkaballapur) ಸ್ಪರ್ಧಿಸುವಂತೆ ಸಲಹೆ ನೀಡೋ ಸಾಧ್ಯತೆ ಇದೆ. ಮೂರು ಕ್ಷೇತ್ರದ ಹೆಸರನ್ನು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ(HD Kumaraswamy) ಘೋಷಿಸಿದ್ದಾರೆ. ಹಾಸನ, ಮಂಡ್ಯ, ಕೋಲಾರದಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಹೆಚ್‌ಡಿಕೆ ಸದ್ಯ ಹೃದಯ ಶಸ್ತ್ರಚಿಕಿತ್ಸೆಗೆಂದು ಚೆನ್ನೈಗೆ ತೆರಳಿದ್ದಾರೆ. ಸದ್ಯ ಸಂಸದೆ ಸುಮಲತಾ ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಸರ್ಕಸ್‌ ಮಾಡುತ್ತಿದೆ. 

ಇದನ್ನೂ ವೀಕ್ಷಿಸಿ: ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಸಿಇಸಿ ಸಭೆ.. ಹೈಕಮಾಂಡ್‌ ಒಪ್ಪಿಗೆ ಬಳಿಕ 10 ಕ್ಷೇತ್ರಗಳ ಲಿಸ್ಟ್‌ ರಿಲೀಸ್‌ !

Related Video