ಬಿಜೆಪಿ ಸೇರಿಲ್ಲ.. ಬಿಜೆಪಿಗೆ ಬೆಂಬಲ.. ಏನಿದರ ಗುಟ್ಟು..? ಪಗಡೆಯಾಟಕ್ಕೆ ಲೇಡಿ ರೆಬೆಲ್ ಸ್ಟಾರ್ ರೆಡಿ.. ಆಟ ಶುರು..!

ಬಿಜೆಪಿ ಸೇರಿಲ್ಲ, ಆದ್ರೂ ಬಿಜೆಪಿಗೆ ಸುಮಲತಾ ಬೆಂಬಲ..! ಮೋದಿಗೆ ಜೈ, ಬಿಜೆಪಿಗೆ ಬಹುಪರಾಕ್ ,ಕಮಲಕ್ಕೆ 'ಸುಮ' ಬಲ.. ಬದಲಾಗುತ್ತಾ ಮಂಡ್ಯ ರಾಜಕೀಯ..? ರೆಬೆಲ್ ಬಲ... ಬಿಜೆಪಿಗೆ ಬೆಂಬಲ.. ಏನಿದು ಸುಮಲತಾ ದಾಳ..? ರಣರಣ ಮಂಡ್ಯದಲ್ಲಿ ರೆಬೆಲ್ ಲೇಡಿ ಶುರು ಮಾಡಿರೋದು ಅದೆಂಥಾ ಪಗಡೆಯಾಟ..?

First Published Mar 11, 2023, 2:31 PM IST | Last Updated Mar 11, 2023, 2:32 PM IST

ಬಿಜೆಪಿ ಸೇರಿಲ್ಲ, ಆದ್ರೂ ಬಿಜೆಪಿಗೆ ಸುಮಲತಾ ಬೆಂಬಲ..! ಮೋದಿಗೆ ಜೈ, ಬಿಜೆಪಿಗೆ ಬಹುಪರಾಕ್ ,ಕಮಲಕ್ಕೆ 'ಸುಮ' ಬಲ.. ಬದಲಾಗುತ್ತಾ ಮಂಡ್ಯ ರಾಜಕೀಯ..? ರೆಬೆಲ್ ಬಲ... ಬಿಜೆಪಿಗೆ ಬೆಂಬಲ.. ಏನಿದು ಸುಮಲತಾ ದಾಳ..? ರಣರಣ ಮಂಡ್ಯದಲ್ಲಿ ರೆಬೆಲ್ ಲೇಡಿ ಶುರು ಮಾಡಿರೋದು ಅದೆಂಥಾ ಪಗಡೆಯಾಟ..? ನೆಲೆ ಇಲ್ಲದ ನೆಲದಲ್ಲಿ ಬಿಜೆಪಿಗೆ ಆನೆಬಲ ತಂದುಕೊಡಲಿದ್ಯಾ ಸುಮಲತಾ ಫ್ಯಾಕ್ಟರಿ... ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಮಂಡ್ಯ ಗೌಡ್ತಿ ಪಗಡೆಯಾಟ. ರೆಬೆಲ್ ಸ್ಟಾರ್ ಅಂಬರೀಶ್ ಮೊದ್ಲು ಜನತಾದಳದಲ್ಲಿದ್ರು, ನಂತ್ರ ಕಾಂಗ್ರೆಸ್ ಸೇರಿದ್ರು. ಆದ್ರೆ ಸುಮಲತಾ ಅಂಬರೀಶ್ ಬಿಜೆಪಿಗೆ ಜೈ ಅಂದಿದ್ದಾರೆ. ಹಾಗಾದ್ರೆ ರೆಬೆಲ್ ಲೇಡಿ, ಅಂಬರೀಶ್ ಆಶಯಗಳಿಗೆ ವಿರುದ್ಧವಾಗಿ ಹೋದ್ರಾ..? ಮಂಡ್ಯದ ಗಂಡು, ರೆಬೆಲ್ ಸ್ಟಾರ್  ಅಂಬರೀಶ್ ಜನತಾದಳದಿಂದ ರಾಜಕೀಯ ಶುರು ಮಾಡಿ ಸಂಸದರಾಗಿ, ನಂತ್ರ ಕಾಂಗ್ರೆಸ್ ಸೇರಿ ಕೇಂದ್ರ, ರಾಜ್ಯ ಮಂತ್ರಿಯಾದವರು. 

ಯಾವತ್ತೂ ಬಿಜೆಪಿ ಸಹವಾಸ ಮಾಡಿದವರಲ್ಲ. ಆದ್ರೆ ಅಂಬಿ ಪತ್ನಿ ಸುಮಲತಾ ಬಿಜೆಪಿಗೆ ಜೈ ಅಂದಿದ್ದಾರೆ. ಹಾಗಾದ್ರೆ ರೆಬೆಲ್ ಲೇಡಿ, ಅಂಬರೀಶ್ ಆಶಯಗಳಿಗೆ ವಿರುದ್ಧವಾಗಿ ಹೋದ್ರಾ..? ಬಿಜೆಪಿ ಸೇರದೇ ಇದ್ರೂ ಸುಮಲತಾ ನಡೆ ಕೇಸರಿ ಪಕ್ಷದ ಕಡೆ ಅನ್ನೋದಂತೂ ಸತ್ಯ. ಹಾಗಾದ್ರೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಬಿಜೆಪಿ ಸೇರ್ತಾರಾ..? ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ..? ಬಿಜೆಪಿ ಸೇರಿಲ್ಲ, ಬಿಜೆಪಿಗೆ ಬೆಂಬಲ.. ಇದು ಮಂಡ್ಯ ಸಂಸದೆ ಸುಮಲತಾ ಅವರ ವರಸೆ. ಇದು ಬಿಜೆಪಿ ಸೇರೋದಕ್ಕೆ ರೆಬೆಲ್ ಲೇಡಿ ಇಟ್ಟಿರೋ ಮೊದಲ ಹೆಜ್ಜೆ. ಹಾಗಾದ್ರೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಬಿಜೆಪಿ ಸೇರ್ತಾರಾ..? ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ..? ಮಂಡ್ಯ ಚದುರಂಗದಲ್ಲಿ ಸುಮಲತಾ ಅಂಬರೀಶ್ ದಾಳ ಉರುಳಿಸಿದ್ದಾರೆ. ಪಗಡೆಯಾಟದಲ್ಲಿ ರೆಬೆಲ್ ಲೇಡಿ ಉರುಳಿಸಿರೋ ದಾಳ ಎಷ್ಟರ ಮಟ್ಟಿಗೆ ಬಿಜೆಪಿಗೆ ಲಾಭ ತಂದುಕೊಡಲಿದೆ ಅನ್ನೋ ಪ್ರಶ್ನೆಗೆ ಮುಂದಿನ ವಿಧಾನಸಭಾ ಚುನಾವಣೆಯೇ ಉತ್ತರ. 

Video Top Stories