ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಪುತ್ರನ ಅಪ್ಪಿ ಕಣ್ಣೀರಿಟ್ಟ ತಾಯಿ, ಮಮ್ಮಲ ಮರುಗುವ ಭಾವುಕ ದೃಶ್ಯ!
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ ಹಲವರಿಗೆ ಸಂತಸ ಮತ್ತೆ ಕೆಲವರಿಗೆ ನಿರಾಸೆ ಮೂಡಿಸಿದೆ. ಹೀಗೆ ಟಿಕೆಟ್ ಕೈತಪ್ಪಿದ ಸವದತ್ತಿ ಕ್ಷೇತ್ರದ ಅಕಾಂಕ್ಷಿ ಸೌರಬ್ ಛೋಪ್ರಾ ಬಿಗಿದಪ್ಪಿ ತಾಯಿ ಕಣ್ಣೀರಿಟ್ಟಿದ್ದಾರೆ. ದಿವಂಗತ ಪತಿ ಫೋಟೋ ಮುಂದೆ ತಾಯಿ ಕಣ್ಣೀರಿನ ಭಾವುಕ ದೃಶ್ಯ ಮನಕಲುಕುವಂತಿದೆ.
ಬೆಳಗಾವಿ(ಏ.06): ಕರ್ನಾಟಕ ವಿಧಾನಸಭಾ ಚುನಾವಣೆಗೆ ತಯಾರಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಸವದತ್ತಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಸೌರಬ್ ಛೋಪ್ರಾಗೆ ಟಿಕೆಟ್ ಕೈತಪ್ಪಿದೆ. ಇದೇ ವೇಳೆ ಮಗನಿಗೆ ಟಿಕೆಟ್ ಮಿಸ್ ಆಗಿರುವ ಕಾರಣದಿಂದ ಭಾವುಕರಾದ ತಾಯಿ ಕಾಂತಾದೇವಿ, ದಿವಗಂತ ಪತಿ ಆನಂದ್ ಛೋಪ್ರಾ ಫೋಟೋ ಮುಂದೆ ಪುತ್ರನ ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಆನಂದ ರಥ ಹೆಸರಿನಲ್ಲಿ ಸವದತ್ತಿ ಕ್ಷೇತ್ರದ ಗ್ರಾಮಗಳಲ್ಲಿ ವಾಸ್ತವ್ಯ ಮೂಲಕ ಕ್ಷೇತ್ರದಲ್ಲಿ ಭಾರಿ ತಯಾರಿ ಮಾಡಿಕೊಂಡಿದ್ದ ಸೌರಬ್ ಛೋಪ್ರಾಗೆ ಈ ಬಾರಿಯೂ ಟಿಕೆಟ್ ಮಿಸ್ ಆಗಿದೆ. ಸೌರಬ್ ಬದಲು ಈ ಸಲವೂ ವಿಶ್ವಾಸ ವೈದ್ಯಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ತಾಯಿ ಮಗನ ಭಾವುಕ ದೃಶ್ಯ ಮನಕಲುಕುವಂತಿದೆ.