ಅನ್ನಭಾಗ್ಯ ಅಕ್ಕಿ ಮೋದಿದ್ದು, ಚೀಲ-ಫೋಟೋ ಸಿದ್ರಾಮಣ್ಣಾನದ್ದು! ಯಾರದ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ!

ನನ್ನನ್ನ ಸಿಎಂ ಮಾಡುವುದಾದರೆ ಕಾಂಗ್ರೆಸ್‍ಗೆ ಮತ ಹಾಕಿ ಎನ್ನುವ ಸಿದ್ದರಾಮಯ್ಯ ಬೇಡಿಕೊಂಡಿದ್ದರು. ಆಗ ಜನರು ಮತಹಾಕಿ 5 ವರ್ಷ ಕೊಟ್ಟಿದ್ರಲ್ಲಾ ಸಿದ್ರಾಮಣ್ಣ, ಏನು ಮಾಡ್ದಪ್ಪಾ.. ಅಕ್ಕಿ ಮೋದಿದೂ, ಚೀಲ ಸಿದ್ದರಾಮಯ್ಯಂದು, ಫೋಟೋ ಸಿದ್ದುದು. ಯಾರ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ ಮಾಡಿದರು.

First Published Nov 27, 2022, 4:14 PM IST | Last Updated Nov 27, 2022, 4:15 PM IST

ಚಿಕ್ಕಮಗಳೂರು (ನ.27) : ನನ್ನನ್ನ ಸಿಎಂ ಮಾಡುವುದಾದರೆ ಕಾಂಗ್ರೆಸ್‍ಗೆ ಮತ ಹಾಕಿ ಎನ್ನುವ ಸಿದ್ದರಾಮಯ್ಯ ಬೇಡಿಕೊಂಡಿದ್ದರು. ಆಗ ಜನರು ಮತಹಾಕಿ 5 ವರ್ಷ ಕೊಟ್ಟಿದ್ರಲ್ಲಾ ಸಿದ್ರಾಮಣ್ಣ, ಏನು ಮಾಡ್ದಪ್ಪಾ.. ಅಕ್ಕಿ ಮೋದಿದೂ, ಚೀಲ ಸಿದ್ದರಾಮಯ್ಯಂದು, ಫೋಟೋ ಸಿದ್ದುದು. ಯಾರ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ ಮಾಡಿದರು. ಸಿದ್ರಾಮಣ್ಣ ಸಾಕು ಕಣ್ಣಪ್ಪಾ ನೀನು ಅಧಿಕಾರಕ್ಕೆ ಬರೋದು ಬೇಡ. ಇವರ ಮೇಲಿದ್ದ ಕೇಸುಗಳನ್ನ ಮುಚ್ಚಿಕೊಳ್ಳಲು ಲೋಕಾಯುಕ್ತವನ್ನ ಮುಚ್ಚಿದರು. ಇವರಿಗೆ ಬೇಕಾದಾಂತೆ ಎಸಿಬಿ ಮಾಡಿ, 50 ಕೇಸ್ ಮುಚ್ಚಿ ಹಾಕಿದ್ದಾರೆ. ಆ 50 ಕೇಸುಗಳು ಇವರ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿವೆ. ರಾಜೇಗೌಡರ ವಿರುದ್ಧವೂ ಕೇಸ್ ದಾಖಲು ಆಗಿದ್ದರೂ, ಆಮಿಷ ನೀಡಿ ತೆಗೆಸಿದ್ದಾರೆ. 
ವಿವೇಕಾನದಂದ ಪ್ರೇರಣೆ ಸಿಗಲಿ ಅಂತ ಆ ಹೆಸರಿಟ್ಟಿದ್ದೇವೆ. ಅವರಿಗೆ ವಿವೇಕಾನಂದ ಹೆಸರೂ ಅಲರ್ಜಿ ಆಗಿದೆ. ಜ್ಞಾನ ಇಲ್ಲದವರಿಗೆ ಅಜ್ಞಾನಿ, ಅವಿವೇಕಿಗಳಿಗೆ ಈ ದೇಶವನ್ನ ಕೊಡಲು ಸಾಧ್ಯವಿಲ್ಲ. ದತ್ತಪೀಠ ಈ ಭಾಗದ ಎಲ್ಲರ ಭಾವನೆ ದೇವಸ್ಥಾನ. ಸಿ.ಟಿ.ರವಿ, ಹಲವು ದಶಕಗಳಿಂದ ಹೋರಾಡ್ತಿದ್ದಾರೆ. ದತ್ತಮಾಲೆ ಧರಿಸಿ ಸಂಕಲ್ಪ ಮಾಡಿದ್ದಾರೆ. ಕಾನೂನು, ಜನರ ಮೂಲಕ ಹೋರಾಡಿದ್ದಾರೆ. ಈಗ ದತ್ತಪೀಠದ ವಿಚಾರ ಒಂದು ಹಂತಕ್ಕೆ ಬಂದಿದೆ. ಮುಂದೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ವಾಗುತ್ತದೆ. ದತ್ತಪೀಠ-ಮುಳ್ಳಯ್ಯನಗಿರಿಗೆ ರೋಪ್‍ವೇ ಕೂಡ ನಿರ್ಮಾಣ ಮಾಡಲಿದ್ದೇವೆ.

Video Top Stories