ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಚರ್ಚೆ: ಅಚ್ಚರಿ ಹೇಳಿಕೆ ಕೊಟ್ಟ ಜಮೀರ್ ಅಹ್ಮದ್

- ಜನರ ಅಭಿಪ್ರಾಯ ಯಾರಿಗೆ ಇದೆ ಅವರು ಸಿಎಂ ಆಗ್ತಾರೆ. ನಮಗೆ ಮಾತನಾಡಬೇಡಿ ಎಂದಿದ್ದಾರೆ : ಜಮೀರ್

- . ಸಿಎಂ ಯಾರು ಎಂಬುವುದನ್ನು ಜನ, ನಮ್ಮ ಹೈಕಮಾಂಡ್ ನಿರ್ಧರಿಸುತ್ತಾರೆ

- ನಾನಿನ್ನು ಸಿಎಂ ಆಗುವ ಮಟ್ಟಕ್ಕೆ ಏರಿಲ್ಲ: ಜಮೀರ್

Suvarna News  | Updated: Jul 2, 2021, 1:59 PM IST

ಬೆಂಗಳೂರು (ಜು. 02): ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಜಮೀರ್ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ. 'ಜನರ ಅಭಿಪ್ರಾಯ ಯಾರಿಗೆ ಇದೆ ಅವರು ಸಿಎಂ ಆಗ್ತಾರೆ. ನಮಗೆ ಮಾತನಾಡಬೇಡಿ ಎಂದಿದ್ದಾರೆ. ನಾವು ಪ್ರತಿಕ್ರಿಯಿಸುವುದಿಲ್ಲ. ಸಿಎಂ ಯಾರು ಎಂಬುವುದನ್ನು ಜನ, ನಮ್ಮ ಹೈಕಮಾಂಡ್ ನಿರ್ಧರಿಸುತ್ತಾರೆ. ಲಿಂಗಾಯತರಲ್ಲಿ ನಮಗೆ ಕೊಡಿ ಅಂತ ಎಂಟಿಬಿ ಹೇಳ್ತಾರೆ, ಅಲ್ಪಸಂಖ್ಯಾತರಲ್ಲಿ ಸಿಎಂ ಇಬ್ರಾಹಿಂ ಕೇಳ್ತಾರೆ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತಾರೆ' ಎಂದು ಜಮೀರ್ ಅಹ್ಮದ್ ಹೇಳಿದ್ಧಾರೆ. 

Read More...