ಶಾಸಕ ಯತ್ನಾಳ್‌ ಹುಲಿ: ಜಯಮೃತ್ಯುಂಜಯ ಸ್ವಾಮಿ ಬ್ಯಾಟಿಂಗ್

ರಾಜ್ಯದಲ್ಲಿ ಒಬ್ಬ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಪಕ್ಷದ ಒಳಗೆ ಇದ್ದುಕೊಂಡು ಸಮುದಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರೊಬ್ಬ ಹುಲಿ ಇದ್ದಂತೆ. ಯತ್ನಾಳ್ ರ ಹೋರಾಟ ನಿಸ್ವಾರ್ಥ ಹೋರಾಟವಾಗಿದೆ. ಸಚಿವ ಮುರುಗೇಶ್‌ ನಿರಾಣಿ ಅವರು ಆ ಹುಲಿ ಜೊತೆ ಮಾತಾಡಲಿ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.14): ರಾಜ್ಯದಲ್ಲಿ ಒಬ್ಬ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಪಕ್ಷದ ಒಳಗೆ ಇದ್ದುಕೊಂಡು ಸಮುದಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರೊಬ್ಬ ಹುಲಿ ಇದ್ದಂತೆ. ಯತ್ನಾಳ್ ರ ಹೋರಾಟ ನಿಸ್ವಾರ್ಥ ಹೋರಾಟವಾಗಿದೆ. ಸಚಿವ ಮುರುಗೇಶ್‌ ನಿರಾಣಿ ಅವರು ಆ ಹುಲಿ ಜೊತೆ ಮಾತಾಡಲಿ. ಯಾವ ಅಧಿಕಾರ, ಸಚಿವ ಸ್ಥಾನದ ಆಕ್ಷೇಪ ಇರಿಸಿಕೊಳ್ಳದೇ ಹೋರಾಟ ಮಾಡಿದ್ದಾರೆ. ಅವರ ಹೆಸರು ಸಿಎಂ‌ ಸ್ಥಾನದಲ್ಲಿ ಇದ್ದರೂ ಹೋರಾಟ ಮಾಡಿದ್ದಾರೆ. ಜನರ ಹೃದಯದಲ್ಲಿ ಬಸವನಗೌಡ ಪಾಟೀಲ್ ನೆಲೆಸಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯದೇ ಇರುವ ಮನಸ್ಸು ಅವರದ್ದು. ವೈಯಕ್ತಿಕ ನಿಂದನೆ ಸರಿಯಲ್ಲ. ಎಲ್ಲರೂ ಒಂದೇ ತಾಯಿಯ ‌ಮಕ್ಕಳು ಎಂದು ಹೇಳಿದರು.

Related Video