ಮುಸ್ಲಿಮರ ಓಲೈಕೆಗೆ ಮುಂದಾದ ಬಿಜೆಪಿ ಸಚಿವ! ಮತ್ತೆ ಹಳೆ ಕ್ಷೇತ್ರಕ್ಕೆ ಮರಳಿ ಬರ್ತಾರಾ ಸಚಿವ ಶ್ರೀರಾಮುಲು?

ಚುನಾವಣೆ ಹೊಸ್ತಿಲಿನಲ್ಲಿ ಸ್ಪರ್ಧೆಯ ಲೆಕ್ಕಾಚಾರ ಶುರುವಾಗಿದೆ. ಮೊಳಕಾಲ್ಮೂರು ಶಾಸಕರಾಗಿರುವ ಶ್ರೀರಾಮುಲು ಮತ್ತೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎನ್ನುವ ಲೆಕ್ಕಾಚಾರಗಳಿಗೆ ಈಗ ರೆಕ್ಕೆಪುಕ್ಕಗಳು ಬಂದಿವೆ.

First Published May 7, 2022, 10:10 PM IST | Last Updated May 7, 2022, 10:10 PM IST

ಬೆಂಗಳೂರು (ಮೇ. 7): ಬಿಜೆಪಿ (BJP) ಪ್ರಭಾವಿ ಸಚಿವರೊಬ್ಬರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ(assembly elections)  ಕ್ಷೇತ್ರ ಬದಲಾವಣೆಯ ಸೂಚನೆ ಕೊಟ್ಟಿದ್ದಾರೆ. ಮೊಳಕಾಲ್ಮೂರು (Molakalmuru) ಶಾಸಕರಾಗಿರುವ ಸಚಿವ ಶ್ರೀರಾಮುಲು(b sriramulu) ತಮ್ಮ ಹಿಂದಿನ ಕ್ಷೇತ್ರವಾದ ಬಳ್ಳಾರಿ ಗ್ರಾಮೀಣದ (Bellari Rural) ಮೇಲೆ ಕಣ್ಣಿಟ್ಟಿದ್ದು ಈ ನಿಟ್ಟಿನಲ್ಲಿ  ಈಗಾಗಲೇ ಪ್ರಯತ್ನವನ್ನೂ ಆರಂಭಿಸಿದ್ದಾರೆ ಎನ್ನಲಾಗಿದೆ.

ಮುಸ್ಲಿಂ (Muslim) ಒಲೈಕೆಗೆ ಮುಂದಾಗಿರೋ ಶ್ರೀರಾಮುಲು‌ ಅವರು ಮಸೀದಿಗಳಿಗೆ ಡೆವಲಪ್ಮೆಂಟ್ (Mosques Development) ಹೆಸರಲ್ಲಿ ಭರ್ಜರಿ ದೇಣಿಗೆಯನ್ನು ನೀಡ್ತಿದ್ದಾರೆ. ಇದಕ್ಕೆ ಕಾರಣ ಅವರು ಮತ್ತೊಮ್ಮೆ ತವರು ಕ್ಷೇತ್ರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೇಲೆ ಕಣ್ಣಿಟ್ಟಿರೋದು ಎನ್ನುವುದು ಗುಟ್ಟಾಗಿಲ್ಲ. ಒಂದು ಕಡೆ ಸಂಘ ಪರಿವಾರದವರ ದೃಷ್ಠಿಯಲ್ಲಿ ಅಲ್ಪ ಸಂಖ್ಯಾತರರಿಂದ ದೂರವಿರಬೇಕು. ಆದರೆ ಇಲ್ಲಿ ದೂರವಿದ್ರೇ ಇಲ್ಲಿ ಮತ ಪಡೆಯೋದು ಕಷ್ಟವಾಗಿದೆ. ಹೀಗಾಗಿ ಸದ್ಯ ಶ್ರೀರಾಮುಲು‌ ಇಕ್ಕಟ್ಟಿಗೆ ಸಿಲುಕಿದ್ದಾರೆ.

KOLAR: ವರ್ತೂರು ಪ್ರಕಾಶ್ ಹಾಗೂ ಮಂಜುನಾಥ ಗೌಡ ಬಿಜೆಪಿ ಸೇರ್ಪಡೆಗೆ ವಿರೋಧ!

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕಾದಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಹಾಗಾಗಿ ಅಲ್ಲಿನ ಮಸೀದಿಗಳಿಗೆ ಅವರು ದೇಣಿಗೆ ನೀಡಲು ಆರಂಭಿಸಿದ್ದಾರೆ ಎನ್ನಲಾಗಿದೆ. ಹಿಜಾಬ್ ಹಾಗೂ ಹಲಾಲ್ ವಿಚಾರದ ವೇಳೆ ಸುಮ್ಮನ್ನಿದ್ದ ಶ್ರೀರಾಮುಲು ಈಗ ಮತಕ್ಕಾಗಿ ಓಲೈಕೆ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

Video Top Stories