Asianet Suvarna News Asianet Suvarna News

News Hour: ಸದನದಲ್ಲಿ ನಡೆಯುತ್ತಾ ವೀರ್ ಸಾವರ್ಕರ್ ಫೋಟೋ ಫೈಟ್?

ಬೆಳಗಾವಿಯ ಸುವರ್ಣಸೌಧದಲ್ಲಿರುವ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಪ್ರತಿಮೆಯನ್ನು ತಾನು ಅವಕಾಶ ಸಿಕ್ಕಿದರೆ ತೆಗೆದು ಹಾಕುವುದಾಗಿ ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದು, ಇವರ ಹೇಳಿಕೆ ಈಗ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

ಬೆಳಗಾವಿಯ ಸುವರ್ಣಸೌಧದಲ್ಲಿರುವ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಪ್ರತಿಮೆಯನ್ನು ತಾನು ಅವಕಾಶ ಸಿಕ್ಕಿದರೆ ತೆಗೆದು ಹಾಕುವುದಾಗಿ ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದು, ಇವರ ಹೇಳಿಕೆ ಈಗ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಬರೀ ಇಷ್ಟೇ ಇಲ್ಲ ವೀರ ಸಾವರ್ಕರ್ ಅವರಿಗೆ ಸ್ವಾತಂತ್ರ್ಯ ಹೋರಾಟಗಾರನ ಬಿರುದು ಯಾರು ಕೊಟ್ಟಿದ್ದು? ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಅವರ ಫೋಟೋವನ್ನು ತೆಗೆದರೆ ಸೂಕ್ತ ಎಂದು ಹೇಳಿದ್ದಲ್ಲದೇ, ನೆಹರೂ ಫೋಟೋವನ್ನು ಸದನಲ್ಲಿ ಹಾಕಬೇಕು ಎಂದು ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ. ಪ್ರಿಯಾಂಕಾ ಖರ್ಗೆ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
 

Video Top Stories