Asianet Suvarna News Asianet Suvarna News

ಔಷಧಿ ರಿಯಾಕ್ಷನ್: ಪರೋಕ್ಷವಾಗಿ ಸಿಎಂ ಆಪ್ತ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದ ಸಚಿವ

ಸಿಎಂ ಯಡಿಯೂರಪ್ಪನವರೂ ಸಹ ಇದು ಆತ್ಮಹತ್ಯೆ ಯತ್ನ ಎನ್ನುವುದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಷ್ಟೆಲ್ಲಾ ಆಗಿದ್ರೂ ಸಹ ಸಚಿವ ನಾರಾಯಣ ಗೌಡ್ರು, ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದಿದ್ದಾರೆ.

ಮಡಿಕೇರಿ, (ನ.29): ಸಿಎಂ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರು ಆತ್ಮಹತ್ಯೆ ಯತ್ನಿಸಿದ್ದಾರೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ.

ಈ ಹಿಂದೆ ಪಿಎ ಗಲಾಟೆ ಎಲ್ಲಿಗೆ ಬಂತು ಗೊತ್ತಲ್ಲ: ಈಶ್ವರಪ್ಪಗೆ ಡಿಕೆಶಿ ತಿರುಗೇಟು 

ಸ್ವತಃ ಅವರ ಪತ್ನಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಸಿಎಂ ಯಡಿಯೂರಪ್ಪನವರೂ ಸಹ ಇದು ಆತ್ಮಹತ್ಯೆ ಯತ್ನ ಎನ್ನುವುದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಷ್ಟೆಲ್ಲಾ ಆಗಿದ್ರೂ ಸಹ ಸಚಿವ ನಾರಾಯಣ ಗೌಡ್ರು, ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದಿದ್ದಾರೆ.

Video Top Stories