'ಗಲಾಟೆಗೆ ಕಾಂಗ್ರೆಸ್ಸಿಗರು ಸಿದ್ಧರಾಗಿ ಬಂದಿದ್ದರು, ಇತಿಹಾಸದಲ್ಲಿ ನಡೆಯಬಾರದ ಘಟನೆಗೆ ಕಾರಣರಾದ್ರು'
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಶಾಸಕರು ಸಭಾಪತಿಗಳ ಕುರ್ಚಿಗಾಗಿ ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್ - ಬಿಜೆಪಿ ಸದಸ್ಯರು ಕೈಕೈ ಮಿಲಾಯಿಸಿದ್ದಾರೆ.
ಬೆಂಗಳೂರು (ಡಿ. 15): ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಶಾಸಕರು ಸಭಾಪತಿಗಳ ಕುರ್ಚಿಗಾಗಿ ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್ - ಬಿಜೆಪಿ ಸದಸ್ಯರು ಕೈಕೈ ಮಿಲಾಯಿಸಿದ್ದಾರೆ.
ಪರಿಷತ್‌ನಲ್ಲಿ ಕೈ ನಾಯಕರ ಹೈಡ್ರಾಮ ; ಗೃಹ ಸಚಿವರು ಗರಂ
'ಪರಿಷತ್‌ನಲ್ಲಿ ಗಲಾಟೆಗೆ ಕಾಂಗ್ರೆಸ್ಸಿಗರು ಸಿದ್ಧರಾಗಿ ಬಂದಿದ್ದರು. ಇತಿಹಾಸದಲ್ಲಿ ನಡೆಯಬಾರದ ಘಟನೆಗೆ ಕಾರಣರಾದ್ರು. ಕಲಾಪ ಮುಂದೂಡಲೆಂದೇ ಸಭಾಪತಿ ತಯಾರಾಗಿ ಬಂದಿದ್ದರು. ಈ ಎಲ್ಲಾ ಬೆಳವಣಿಗೆ ಬಗ್ಗೆ ನಾವು ಮನವಿ ಮಾಡಿದ್ದೇವೆ. ಅವಿಶ್ವಾಸದ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಕೇಳುತ್ತೇವೆ. ರಾಜ್ಯಪಾಲರ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ' ಎಂದು ಕಲಾಪದ ಬಳಿಕ ಮಾಧುಸ್ವಾಮಿ ಹೇಳಿದ್ದಾರೆ.