
ಕಾಂಗ್ರೆಸ್ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
ಕಾಂಗ್ರೆಸ್ ಪಕ್ಷದೊಳಗೆ ಮೂಲ ಮತ್ತು ವಲಸಿಗರ ಸಂಘರ್ಷ ತಾರಕಕ್ಕೇರಿದೆ. ಡಿ.ಕೆ. ಸುರೇಶ್ ಅವರ 'ಬೀದಿ ನಾಯಿ' ಹೇಳಿಕೆ ಹೊಸ ವಿವಾದ ಸೃಷ್ಟಿಸಿದ್ದು, ಇದರ ನಡುವೆಯೇ ದಲಿತ ಸಿಎಂ ದಾಳ ಮತ್ತು ಡಿಕೆ ಪಟ್ಟಾಭಿಷೇಕದ ಚರ್ಚೆಗಳು 'ಕೈ' ಪಾಳಯದಲ್ಲಿ ತೀವ್ರಗೊಂಡಿವೆ.
ಕಾಂಗ್ರೆಸ್ ಕೋಟೆಯೊಳಗೆ ಮತ್ತೊಮ್ಮೆ ದಲಿತ ಸಿಎಂ ದಾಳ ಉರುಳಿಸಿದ್ದಾರೆ ಸಚಿವ ಹೆಚ್.ಸಿ.ಮಹದೇವಪ್ಪ.. ಆ ದಾಳಕ್ಕೆ ಬೆಂಬಲವಾಗಿ ನಿಂತಿದ್ದಾರೆ ಗೃಹಸಚಿವ ಡಾ.ಜಿ.ಪರಮೇಶ್ವರ್. ಅಷ್ಟಕ್ಕೂ ಮಹದೇವಪ್ಪನವರು ಹೇಳಿದ್ದೇನು.? ಆಗಾಗ ಡಿಕೆ ಪಟ್ಟಾಭಿಷೇಕಕ್ಕೆ ಅವರ ಬಣವು ಮುಹೂರ್ತ ಫಿಕ್ಸ್ ಮಾಡ್ತಲೇ ಇರುತ್ತೆ. ಅಷ್ಟಕ್ಕೂ ಅವರಿಗೆ ಆ ಮುಹೂರ್ತವನ್ನ ಕೊಡೋದ್ಯಾರು..?