4ನೇ ಉಪಮುಖ್ಯಮಂತ್ರಿಗೆ ಸಾಕ್ಷಿಯಾಗುತ್ತಾ ಕರ್ನಾಟಕ.?

ಈಗಾಗಲೇ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಹೈಕಮಾಂಡ್ ಸೃಷ್ಟಿ ಮಾಡಿದ್ದು, ಬಿಎಸ್‌ವೈಗೆ ಕಣ್ಣು ಕೆಂಪಾಗಿಸಿದೆ. ಇದೀಗ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಯಾಗುತ್ತಾ? ಅಥವಾ ಇಲ್ಲ ಎನ್ನುವುದು ಹೈಮಾಂಡ್‌ಗೆ ಬಿಟ್ಟಿದ್ದು.

First Published Jan 29, 2020, 4:30 PM IST | Last Updated Jan 29, 2020, 5:32 PM IST

ಬೆಂಗಳೂರು,(ಜ.29): ಒಂದು ಕಡೆ ಸಂಪುಟ ವಿಸ್ತರಣೆ ಮತ್ತೊಂದೆಡೆ ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು ಲಾಬಿ ನಡೆಸುತ್ತಿರುವುದು ಬಿಎಸ್‌ವೈಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

 'ಶ್ರೀರಾಮುಲು DCM ಆಗಬೇಕು ಅನ್ನೋದು ಜನರ ಬೇಡಿಕೆ,ನಾನೇಕೆ ಅಲ್ಲಗಳೆಯಲಿ' 

ಪರೋಕ್ಷವಾಗಿ ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯ ಹಾಗೂ ಶ್ರೀಗಳಿಂದ ಡಿಸಿಎಂ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದು ಬಿಜೆಪಿ ಹೈಕಾಂಡ್‌ಗೆ ದಿಕ್ಕುತೋಚದಂತಾಗಿದೆ. 

ಈಗಾಗಲೇ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಹೈಕಮಾಂಡ್ ಸೃಷ್ಟಿ ಮಾಡಿದ್ದು, ಬಿಎಸ್‌ವೈಗೆ ಕಣ್ಣು ಕೆಂಪಾಗಿಸಿದೆ. ಇದೀಗ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಯಾಗುತ್ತಾ? ಅಥವಾ ಇಲ್ಲ ಎನ್ನುವುದು ಹೈಮಾಂಡ್‌ಗೆ ಬಿಟ್ಟಿದ್ದು.

ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ