ನನ್ನ ಜೀವನದಲ್ಲಿ ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ: ಸಚಿವ ಆರಗ ಜ್ಞಾನೇಂದ್ರ

ಪಿಎಸ್ಐ ಸ್ಕ್ಯಾಮ್ ಆಗುತ್ತೆ, ಸಾಕ್ಷಿ ಸಿಕ್ತಿದ್ದ ಹಾಗೇ ತನಿಖೆಗೆ ಒಳಪಡಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Share this Video
  • FB
  • Linkdin
  • Whatsapp

ಮಲೆನಾಡು ಮಿತ್ರವೃಂದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಎಸ್ಐ ಹಗರಣ ಪ್ರಕರಣದಲ್ಲಿ 107 ಜನರನ್ನು ಅರೆಸ್ಟ್ ಮಾಡಿಸಿದ್ದೇನೆ. IPS ಅಧಿಕಾರಿ ADGP ರ್ಯಾಂಕ್'ನ ಅಧಿಕಾರಿಯನ್ನು ಅರೆಸ್ಟ್ ಮಾಡಿಸಿದ್ದೇವೆ ಎಂದರು. ಈಗ ಅವರು ಜೈಲಿನೊಳಗೆ ಇದ್ದಾರೆ, ಇದು ಇಡೀ ದೇಶದಲ್ಲೇ ಪ್ರಥಮ.ನನ್ನ ಜೀವನದಲ್ಲಿ ಪಾರದರ್ಶಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಸರ್ಟಿಫಿಕೇಟೂ ಬೇಕಿಲ್ಲ ಎಂದರು.ಹಾಗೆ ನನ್ನ ಆತ್ಮ ನನ್ನ ಕಳ್ಳ ಅಂದ ದಿವಸ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ. ಅಲ್ಲಿವರೆಗೆ ಧೈರ್ಯವಾಗಿ ಬದುಕುತ್ತೇನೆ ಎಂದರು. ಜನರ ಪ್ರೀತಿಯಿಂದ ಬೆಳದದ್ದು ನಾನು, ತೀರ್ಥಹಳ್ಳಿಯ ಜನ ನಾಲ್ಕನೇ ಬಾರಿ ನನ್ನನ್ನು ಆರಿಸಿ ಕಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Related Video