ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದ ಪಾಲಿಕೆ: ವಿವಾದಿತ ಮಸೀದಿಗೆ ಬೀಗ ಹಾಕಿದ ವಕ್ಫ್ ಬೋರ್ಡ್

ಬೆಳಗಾವಿಯಲ್ಲಿ ವಸತಿ ಪ್ರದೇಶದಲ್ಲಿ ಮಸೀದಿ ನಿರ್ಮಾಣ ಆರೋಪ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್'ನಿಂದ ಮಸೀದಿಗೆ ಬೀಗ ಹಾಕಲಾಗಿದೆ.

Share this Video
  • FB
  • Linkdin
  • Whatsapp

ಬೆಳಗಾವಿ ಸಾರಥಿ ನಗರದ ಫಾತೀಮಾ ಮಸೀದಿಗೆ ಮಹಾನಗರ ಪಾಲಿಕೆ ನೋಟಿಸ್‌ ಹಿನ್ನೆಲೆ ಬೀಗ ಹಾಕಲಾಗಿದೆ. ವಸತಿ ಜಾಗದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಆರೋಪ ಹಿನ್ನೆಲೆಯಲ್ಲಿ ಕೂಡಲೇ ಮಸೀದಿ ಬಂದ್‌ ಮಾಡಿಸುವಂತೆ ಆಗ್ರಹಿಸಿ ಕಳೆದ ವಾಗ ಡಿಸಿಗೆ ಹಿಂದೂ ಸಂಘಟನೆಗಳು ಮನವಿ ನೀಡಿದ್ದವು. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು, ಮಸೀದಿಗೆ ಬೀಗ ಹಾಕುವಂತೆ ವಕ್ಫ್ ಬೋರ್ಡ್‌'ಗೆ ನೋಟೀಸ್‌ ನೀಡಲಾಗಿತ್ತು. ಪಾಲಿಕೆ ಆಯುಕ್ತರು ನೋಟಿಸ್‌ ನೀಡ್ತಿದ್ದಂತೆ ಮಸೀದಿಗೆ ಬೀಗ ಹಾಕಲಾಗಿದೆ.

Related Video