ಸುಮಲತಾ ಚದುರಂಗ, ಜೆಡಿಎಸ್ ಶಾಸಕ ಬಿಟ್ಟಿಟ್ಟ ರಹಸ್ಯ!
ಮಂಡ್ಯ ರಣರಂಗದಲ್ಲಿ ಕಾಂಗ್ರೆಸ್-ಜೆಡಿಎಸ್ಸನ್ನು ಎದುರಿಸಿ ನಿಲ್ಬೇಕು ಅಂದ್ರೆ ಬಿಜೆಪಿಗೆ ಸುಮಲತಾ ಅಂಬರೀಶ್ ಅನಿವಾರ್ಯ. ಹೀಗಾಗಿ ರೆಬೆಲ್ ಲೇಡಿಗೆ ಬಿಜೆಪಿ ರೆಡ್ ಕಾರ್ಪೆಟ್ ಹಾಕಿದೆ.
ಪ್ರಧಾನಿ ಮೋದಿಯವರ ಮಂಡ್ಯ ಎಂಟ್ರಿಗೂ ಮೊದಲೇ ಕಮಲ ಹಿಡೀತಾರಾ ರೆಬೆಲ್ ಲೇಡಿ..? ಮತ್ತೊಂದು ರಾಜಕೀಯ ಕ್ರಾಂತಿಗೆ ರೆಡಿಯಾದ್ರಾ ಮಂಡ್ಯ ಗೆದ್ದು ಇಂಡಿಯಾ ತಿರುಗಿ ನೋಡುವಂತೆ ಮಾಡಿದ್ದ ಗಟ್ಟಿಗಿತ್ತಿ..? ಮಂಡ್ಯ ರಣರಂಗದಲ್ಲಿ ಕಾಂಗ್ರೆಸ್-ಜೆಡಿಎಸ್ಸನ್ನು ಎದುರಿಸಿ ನಿಲ್ಬೇಕು ಅಂದ್ರೆ ಬಿಜೆಪಿಗೆ ಸುಮಲತಾ ಅಂಬರೀಶ್ ಅನಿವಾರ್ಯ. ಹೀಗಾಗಿ ರೆಬೆಲ್ ಲೇಡಿಗೆ ಬಿಜೆಪಿ ರೆಡ್ ಕಾರ್ಪೆಟ್ ಹಾಕಿ ಬರ ಮಾಡಿಕೊಂಡಿದೆ. ಸುಮಲತಾ ಅಂಬರೀಶ್ ಶುಕ್ರವಾರವೇ ಬಿಜೆಪಿ ಸೇರಲಿದ್ದಾರೆ ಅಂತ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಹೇಳ್ತಿದ್ದಾರೆ. ಇದ್ರ ಬೆನ್ನಲ್ಲೇ ಸುಮಲತಾ ಶುಕ್ರವಾರವೇ ಸುದ್ದಿಗೋಷ್ಠಿಯೊಂದನ್ನು ಕರೆದು ಬಿಜೆಪಿಗೆ ಜೈ ಎಂದಿದ್ದಾರೆ. ಆದರೆ ಪಕ್ಷ ಸೇರ್ಪಡೆಯಾಗಿಲ್ಲ. ಬಿಜೆಪಿಗೆ ಸೇರದೆ ಕೇವಲ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ