Asianet Suvarna News Asianet Suvarna News

ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಅಂಬರೀಶ್?

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿಗೆ ನೆಲೆಯೆ ಇರಲಿಲ್ಲ. ಆದ್ರೆ,  ಕಳೆದ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಮಲ ಅರಳಿಸೋ ಮೂಲಕ ಸಕ್ಕರೆ ನಾಡಲ್ಲಿ ಬಿಜೆಪಿ ಖಾತೆ ತೆರೆದಿದೆ. ಇದೀಗ ಮಂಡ್ಯದಲ್ಲಿ ಮತ್ತಷ್ಟು ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಕೇಸರಿ ನಾಯಕರು ಭರ್ಜರಿ ಪ್ಲಾನ್​ ಮಾಡಿ ಅಖಾಡಕ್ಕಿಳಿದಿದ್ದಾರೆ.

ಬೆಂಗಳೂರು/ಮಂಡ್ಯ, (ಏ.25): ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿಗೆ ನೆಲೆಯೆ ಇರಲಿಲ್ಲ. ಆದ್ರೆ,  ಕಳೆದ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಮಲ ಅರಳಿಸೋ ಮೂಲಕ ಸಕ್ಕರೆ ನಾಡಲ್ಲಿ ಬಿಜೆಪಿ ಖಾತೆ ತೆರೆದಿದೆ. ಇದೀಗ ಮಂಡ್ಯದಲ್ಲಿ ಮತ್ತಷ್ಟು ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಕೇಸರಿ ನಾಯಕರು ಭರ್ಜರಿ ಪ್ಲಾನ್​ ಮಾಡಿ ಅಖಾಡಕ್ಕಿಳಿದಿದ್ದಾರೆ.

Mandya Politics: ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಸುಳಿವು ನೀಡಿದ್ರಾ ಸುಮಲತಾ?

ಈ ಹಿನ್ನೆಲೆಯಲ್ಲಿ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಗೆ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆದಿದ್ದು, ಈಗಾಗಲೇ ಮಾತುಕತೆಗಳು ಸಹ ಆಗಿವೆ ಎನ್ನುವ ಮಾಹಿತಿ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ಬಹಿರಂಗ ಬೆಂಬಲ ಘೋಷಿಸಿತ್ತು. ಅದರ ಆಧಾರದ ಮೇಲೆ ಸುಮಲತಾ ಅವರನ್ನ ಸೆಳೆದ ಅವರ ಮೂಲಕ ಮಂಡ್ಯದಲ್ಲಿ ಕಮಲ ಅರಳಿಸುವ ಪ್ಲಾನ್ ನಡೆದಿದೆ. ಅಮಿತ್ ಶಾ ಅಧಿಕೃತ ಎಂಟ್ರಿ ಬಳಿಕ ಎಲ್ಲಾ ಪ್ಲಾನ್ ರಿವೀಲ್ ಆಗಲಿದೆ. 

Video Top Stories