Asianet Suvarna News Asianet Suvarna News

ಬಿಜೆಪಿ ಸೇರ್ತಾರಾ ಮಂಡ್ಯ ಸಂಸದೆ? ಸುಮಲತಾ ಅಂಬರೀಶ್ ಫಸ್ಟ್‌ ರಿಯಾಕ್ಷನ್

ಬಿಜೆಪಿ ನಾಯಕರು (BJP Leaders) ರೆಡ್​ ಕಾರ್ಪೆಟ್​ ಹಾಕಿ ಸಂಸದೆ ಸುಮಲತಾ (MP Sumalatha) ಅವರಿಗೆ ಸ್ವಾಗತ ಕೋರಿದ್ದಾರೆ. ಈಗಾಗಲೇ ಬಿಜೆಪಿ ಹಿರಿಯ ನಾಯಕರ ಮಾತುಕತೆಗಳು ಸಹ ಆಗಿವೆ ಎನ್ನುವ ಮಾಹಿತಿ ಇದ್ದು, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಈ ಬಿಜೆಪಿ ಸೇರ್ಪಡೆಯಾಗುವ ಸುದ್ದಿಗೆ ಸ್ವತಃ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ಕೊಟ್ಟಿದ್ದು ಹೀಗೆ...

ಮಂಡ್ಯ (ಏ.28):  ಸದ್ಯ ರಾಜಕಾರಣದಲ್ಲಿ ಸುಮಲತಾ ಅಂಬರೀಶ್ ಅವರದ್ದೇ ಸುದ್ದಿ...ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಭದ್ರಕೋಟೆಯಲ್ಲಿ ಹವಾ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಚುನವಣೆಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಸುಮಲತಾ ಅವರಿಗೆ ಗಾಳ ಹಾಕಿದೆ.

ಬಿಜೆಪಿ ಸೇರ್ಪಡೆ ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ್ರಾ ಸುಮಲತಾ ಅಂಬರೀಶ್..?

ಬಿಜೆಪಿ ನಾಯಕರು (BJP Leaders) ರೆಡ್​ ಕಾರ್ಪೆಟ್​ ಹಾಕಿ ಸಂಸದೆ ಸುಮಲತಾ (MP Sumalatha) ಅವರಿಗೆ ಸ್ವಾಗತ ಕೋರಿದ್ದಾರೆ. ಈಗಾಗಲೇ ಬಿಜೆಪಿ ಹಿರಿಯ ನಾಯಕರ ಮಾತುಕತೆಗಳು ಸಹ ಆಗಿವೆ ಎನ್ನುವ ಮಾಹಿತಿ ಇದ್ದು, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಈ ಬಿಜೆಪಿ ಸೇರ್ಪಡೆಯಾಗುವ ಸುದ್ದಿಗೆ ಸ್ವತಃ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ಕೊಟ್ಟಿದ್ದು ಹೀಗೆ...

Video Top Stories