Suvarna special: ಕೇಸರಿ ಪಕ್ಷದ ಕಡೆ ಮಂಡ್ಯ ಗೌಡ್ತಿಯ ನಿಗೂಢ ಹೆಜ್ಜೆ..!?

ಸಂಸದೆ ಸುಮಲತಾ ಅಂಬರೀಶ್ ಅವರ ಒಂದೊಂದು ಹೆಜ್ಜೆಯೂ ನಿಗೂಢವಾಗಿದೆ. ನಾನು ಪಕ್ಷೇತರ ಸಂಸದೆ, ಪಕ್ಷೇತರಳಾಗಿಯೇ ಇರ್ತೇನೆ ಅಂತ ಹೇಳ್ತಾ ಹೇಳ್ತಾ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ತಿದ್ದಾರೆ.

First Published Mar 5, 2023, 3:30 PM IST | Last Updated Mar 5, 2023, 3:30 PM IST

ಬೆಂಗಳೂರು (ಮಾ.05): ಸಂಸದೆ ಸುಮಲತಾ ಅಂಬರೀಶ್ ಅವರ ಒಂದೊಂದು ಹೆಜ್ಜೆಯೂ ನಿಗೂಢವಾಗಿದೆ. ನಾನು ಪಕ್ಷೇತರ ಸಂಸದೆ, ಪಕ್ಷೇತರಳಾಗಿಯೇ ಇರ್ತೇನೆ ಅಂತ ಹೇಳ್ತಾ ಹೇಳ್ತಾ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ತಿದ್ದಾರೆ.

ಹಾಗಾದ್ರೆ ಮಂಡ್ಯ ಸಂಸದೆ ಬಿಜೆಪಿ ಸೇರಿಯೇ ಬಿಡ್ತಾರಾ..? ಈ ಬಗ್ಗೆ ಅವರ ಆಪ್ತ ಮೂಲಗಳು ಹೇಳೇದೇನು..? ಕೇಸರಿ ಪಕ್ಷದ ಕಡೆ ಮಂಡ್ಯ ಗೌಡ್ತಿಯ ನಿಗೂಢ ಹೆಜ್ಜೆ..!? ಬಿಜೆಪಿ ಸಭೆಯಲ್ಲಿ ಲೇಡಿ ರೆಬೆಲ್ ಸ್ಟಾರ್.. ಮಂಡ್ಯ ರಾಜಕಾರಣದಲ್ಲಿ ಸಂಚಲನ..! ಮಂಡ್ಯದ ಮಣ್ಣಿನ ಮಗನನ್ನು ಭೇಟಿ ಮಾಡಿದ್ದೇಕೆ ಸುಮಲತಾ ಅಂಬರೀಶ್..? ಬಿಜೆಪಿ ಸೇರ್ಪಡೆಗೆ ಕೃಷ್ಣ ತಂತ್ರ ಹೆಣೆದರಾ ರೆಬೆಲ್ ಲೇಡಿ..? ಪ್ರಧಾನಿ ಮೋದಿ ಸಮ್ಮುಖದಲ್ಲೇ ಹೊರ ಬೀಳಲಿದ್ಯಾ ಮಹಾ ರಹಸ್ಯ..? ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

ಸುಮಲತಾ ಅವರ ರಾಜಕೀಯ ಭವಿಷ್ಯದ ಬಗ್ಗೆ ಅವರ ಆಪ್ತರು ಹೇಳಿದ ರಹಸ್ಯ ಇದು. ಹಾಗಾದ್ರೆ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಬೆಂಬಲ ಯಾರಿಗೆ..? ತೆರೆಮರೆಯಲ್ಲಿ ಬಿಜೆಪಿ ಪರ ಕೆಲಸ ಮಾಡ್ತಾರಾ..? ಎನ್ನುವುದನ್ನು ಕಾದುನೋಡಬೇಕಿದೆ. ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಸುಮಲತಾ ಅಂಬರೀಶ್ ಯಾವ ಪಕ್ಷಕ್ಕೂ ಸೇರೋದಿಲ್ವಂತೆ. ಹಾಗಾದರೆ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆಯ ಬೆಂಬಲ ಯಾವ ಪಕ್ಷಕ್ಕೆ..? ಬಿಜೆಪಿ ಸೇರ್ಪಡೆಯ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಎಚ್ಚರಿಕೆಯ ಹೆಜ್ಜೆ ಇಡ್ತಿದ್ದಾರೆ. ಬಿಜೆಪಿ ಸೇರಿದ್ರೆ ಆಗೋ ಲಾಭ-ನಷ್ಟಗಳ ಲೆಕ್ಕಾಚಾರ ಹಾಕ್ತಿದ್ದಾರೆ. ಆದರೆ ರೆಬೆಲ್ ಲೇಡಿಯ ನಡೆ ಯಾವ ಪಕ್ಷದ ಕಡೆ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಇನ್ನೂ ಕೆಲ ತಿಂಗಳು ಕಾಯಲೇಬೇಕು.