ನಮ್ಮಲ್ಲಿ ಬಿರುಕು ಬರಬಾರದು: 'ಕೈ' ಪಾಳೆಯಕ್ಕೆ ಮಲ್ಲಿಕಾರ್ಜುನ ಖರ್ಗೆ ಪಾಠ

ರಾಜ್ಯ ಕಾಂಗ್ರೆಸ್'ನಲ್ಲಿ ಸಿಎಂ ಚರ್ಚೆ ಆಗಬಾರದು, ನಮ್ಮಲ್ಲಿ ಬಿರುಕು ಬರಬಾರದು ಎಂದು 'ಕೈ' ಪಾಳೆಯಕ್ಕೆ ಮಲ್ಲಿಕಾರ್ಜುನ ಖರ್ಗೆ ಪಾಠ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಹೇಗಾದ್ರೂ ಮಾಡಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಏರುವ ಧಾವಂತದಲ್ಲಿ ಕಾಂಗ್ರೆಸ್ ಪಕ್ಷವಿದೆ. ಈಗಾಗಲೇ ಅನೇಕ ರಣತಂತ್ರವನ್ನು ಹೂಡಿ ಗದ್ದುಗೆ ಗುದ್ದಾಟಕ್ಕೆ ರಂಗು ತಂದಿದೆ ಕಾಂಗ್ರೆಸ್. ಎಲ್ಲಾ ಪಕ್ಷಗಳಲ್ಲೂ ಇರೋ ಥರವೇ ಇಲ್ಲಿಯೂ ಕೂಡ ಒಂದಿಷ್ಟು ಕುಂದು ಕೊರತೆಗಳು ಇವೆ. ಅದರಲ್ಲಿ ಪ್ರಮುಖವಾಗಿದ್ದೇ ಬಣಗಳ ಜಗಳ. ಈ ವಿಚಾರವಾಗಿ ಖರ್ಗೆ ಖಡಕ್ ಮಾತನ್ನಾಡಿದ್ದಾರೆ. ಖರ್ಗೆಯ ಒಗ್ಗಟ್ಟಿನ ಪಾಠವನ್ನು ಕೇಳಿದ ಬೆನ್ನಲ್ಲೇ ಮತ್ತೆ ಬಣಗಳ ತಿಕ್ಕಾಟ ಶುರುವಾಗಿದೆ. ಆಲಿಸಿದ್ದನ್ನು ಕೈ ನಾಯಕರು ಪಾಲಿಸೋದಿಲ್ವಾ ಅನ್ನೋ ಪ್ರಶ್ನೆಯೂ ಹುಟ್ಟಿದೆ. 

ಆನೆ ದಾಳಿಯಿಂದ ಹಾನಿ, ಪರಿಹಾರ ಮೊತ್ತ ಡಬಲ್‌: ಸಿಎಂ ಸಭೆ ತೀರ್ಮಾನ

Related Video