ಖರ್ಗೆ ‘ವಿಷ’ ಹೇಳಿಕೆಗೆ ಮೋದಿ ಮಾಸ್ಟರ್ ಸ್ಟ್ರೋಕ್: 91 ಬೈಗುಳವೇ ಮೋದಿಗೆ ತಂದುಕೊಟ್ಟಿದೆ ಬಾಹುಬಲ!

ರಾಜಕೀಯ ವಿರೋಧಿಗಳ ಬೈಗುಳವನ್ನೇ ಆಶೀರ್ವಾದವಾಗಿಸಿಕೊಂಡು ಕಮಲ ಸಾಮ್ರಾಜ್ಯ ಕಟ್ಟಿರೋ ಮೋದಿ, ಕರ್ನಾಟಕದಲ್ಲೂ ಅದೇ ಅದನ್ನೇ ಅಸ್ತ್ರವಾಗಿ ಹಿಡ್ಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿರೋ ವಿಷದ ಮಾತು. ಅದೊಂದು ಮಾತೇ, ಕರ್ನಾಟಕ ಕುರುಕ್ಷೇತ್ರದಲ್ಲಿ ಕೇಸರಿ ಕೈಯಲ್ಲಿ ಇರೋ ಅಸ್ತ್ರವಾಗಿ ಬದಲಾಗಿದೆ. ಕುರುಕ್ಷೇತ್ರದ ಅಖಾಡಕ್ಕೆ ನುಗ್ಗಿರೋ ರಣವಿಕ್ರಮ ಮೋದಿ, ತಮ್ಮ ವಿರುದ್ಧದ ನಿಂದನಾಸ್ತ್ರವನ್ನೇ ಕಾಂಗ್ರೆಸ್ ವಿರುದ್ಧ ಪ್ರಯೋಗಿಸಿದ್ದಾರೆ. ರಾಜಕೀಯ ವಿರೋಧಿಗಳ ಬೈಗುಳವನ್ನೇ ಆಶೀರ್ವಾದವಾಗಿಸಿಕೊಂಡು ಕಮಲ ಸಾಮ್ರಾಜ್ಯ ಕಟ್ಟಿರೋ ಮೋದಿ, ಕರ್ನಾಟಕದಲ್ಲೂ ಅದೇ ಅದನ್ನೇ ಅಸ್ತ್ರವಾಗಿ ಹಿಡ್ಕೊಂಡಿದ್ದಾರೆ. ಮಾತಿಗೆ ನಿಂತ್ರೆ ಇಡೀ ಜನಸ್ತೋಮವನ್ನೇ ಮಂತ್ರಮುಗ್ಧಗೊಳಿಸೋ ಶಕ್ತಿ ಮೋದಿ ಅವರಿಗಿದೆ. ಒಂದು ಸಣ್ಣ ಅಸ್ತ್ರ ಸಿಕ್ಕಿದ್ರೆ ಸಾಕು, ಅದನ್ನೇ ಬ್ರಹ್ಮಾಸ್ತ್ರವಾಗಿ ಶತ್ರು ಪಾಳಯಕ್ಕೆ ನುಗ್ಗಿಸೋ ಸರದಾರ ಅವರು.

Related Video