ಖರ್ಗೆ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್‌ಗೆ ನಷ್ಟ, ಸಮೀಕ್ಷೆಯಲ್ಲಿ ಬಯಲಾಯ್ತು ರಹಸ್ಯ!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್‌ಗೆ ಮುಳುವಾಗಿದೆ.ಈ ಕುರಿತು ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಯಲಾಗಿದೆ. ಜನರು ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.02): ಮೋದಿ ವಿಷದ ಹಾವು ಇದ್ದ ಹಾಗೆ, ನೆಕ್ಕಿದರೆ ಸತ್ತು ಹೋಗುತ್ತೀರಿ ಎಂದು ಮಲ್ಲಿಕಾರ್ಜುನ ಖರ್ಗೆ ವೈಯುಕ್ತಿ ನಿಂದನೆ ಇದೀಗ ಕಾಂಗ್ರೆಸ್‌ಗೆ ಮುಳುವಾಗಿದೆ. ಈ ಕುರಿತು ಜಿನ್ಯೂಸ್ ನಡೆಸಿದ ಚುನಾವಣಾ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಖರ್ಗೆ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್‌ಗೆ ನಷ್ಟ ತರಲಿದೆ ಎಂದು ಶೇಕಡಾ 44 ರಷ್ಟು ಮಂದಿ ಹೇಳಿದ್ದಾರೆ. ಶೇಕಡಾ 34 ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ಗೆ ಹೊಡೆತ ನೀಡಲಿದೆ ಎಂದರೆ, ಕೇವಲ ಶೇಕಡಾ 24 ರಷ್ಟು ಜನ ಮಾತ್ರ ಇಲ್ಲ ಎಂದಿದ್ದಾರೆ. ಇನ್ನು ಈ ಹೇಳಿಕೆ ಲಾಭ ಬಿಜೆಪಿಗೆ ಶೇಕಡಾ 56 ರಷ್ಟು ಲಾಭವಾಗಲಿದೆ ಎಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video